More

    ಗ್ಯಾರಂಟಿಗಳಿಗೆ 52ಸಾವಿರ ಕೋಟಿ ರೂ.ಮೀಸಲು

    ಯಲಬುರ್ಗಾ: ಈ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್, ಜನಪರ, ಅಭಿವೃದ್ಧಿ ಮುನ್ನೋಟದ ದೂರದೃಷ್ಠಿವುಳ್ಳದ್ದ್ದಾಗಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

    ಇದನ್ನೂ ಓದಿ: ಬಾಲರಾಮನ ವಿಶ್ರಾಂತಿಗೆ ಪ್ರತಿದಿನ 1 ಗಂಟೆ ಮೀಸಲು: ಇನ್ಮುಂದೆ ಈ ಅವಧಿಯಲ್ಲಿ ರಾಮಮಂದಿರ ಬಾಗಿಲು ಬಂದ್​

    ಪಟ್ಟಣದ ಕಂದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಸರ್ಕಾರದ 5 ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ.ಮೀಸಲಿಡಲಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ನೀರಾವರಿ ಸೇರಿ ಪ್ರಮುಖ ಕ್ಷೇತ್ರಗಳಿಗೆ ಒತ್ತು ಕೊಡಲಾಗಿದೆ. 15ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಲ್ಲಾದೆ, ಜನರ ಪರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಕ್ಷೇತ್ರದ 38 ಕೆರೆ ತುಂಬಿಸುವ ಯೋಜನೆಗೆ 970 ಕೋಟಿ ರೂ., ಚಿಕ್ಕೊಪ್ಪದಲ್ಲಿ ಕೋಲ್ಡ್ ಸ್ಟೋರೇಜ್‌ಗೆ 40 ಕೋಟಿ ರೂ., ಬ್ರಿಜ್ ಕಂ.ಬ್ಯಾರೇಜ್ ನಿರ್ಮಾಣಕ್ಕೆ 40 ಕೋಟಿ ರೂ., ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ 120 ಕೋಟಿ, ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರತ್ಯೇಕ ಪ್ರಾಧಿಕಾರ ರಚನೆ,

    ಅಂಜನಾದ್ರಿಗೆ 100 ಕೋಟಿ, ಜಿಲ್ಲಾಸ್ಪತ್ರೆಗೆ 150 ಕೋಟಿ ರೂ. ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುಮೋದನೆ ಕೊಟ್ಟಿದೆ. ಈ ಬಾರಿಯ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದು, ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಕೃಷ್ಣಾ ಬಿಸ್ಕಿಂ ನೀರಾವರಿ ಯೋಜನೆಗಳು ರಾಜ್ಯದಲ್ಲಿ ಪ್ರಗತಿ ಹಂತದಲ್ಲಿಲ್ಲ. ಕಾರಣ ಅಂತರ್‌ರಾಜ್ಯಗಳ ನದಿನೀರು ಹಂಚಿಕೆ ವಿವಾದ ನ್ಯಾಯಾಲಯದಲ್ಲಿದೆ. ಹೀಗಾಗಿ ನೀರಾವರಿ ಯೋಜನೆ ವಿಳಂಬವಾಗಿದೆ. ಹಂಚಿಕೆಯಾದ ನೀರಿನಿಂದ ಕೆರೆ ತುಂಬಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts