More

    ಬಾಲರಾಮನ ವಿಶ್ರಾಂತಿಗೆ ಪ್ರತಿದಿನ 1 ಗಂಟೆ ಮೀಸಲು: ಇನ್ಮುಂದೆ ಈ ಅವಧಿಯಲ್ಲಿ ರಾಮಮಂದಿರ ಬಾಗಿಲು ಬಂದ್​

    ಅಯೋಧ್ಯೆ: ಇಂದಿನಿಂದ (ಫೆ.16) ಪ್ರತಿದಿನ ಮಧ್ಯಾಹ್ನ 1 ಗಂಟೆಗಳ ಕಾಲ ಅಯೋಧ್ಯೆ ರಾಮ ಮಂದಿರವನ್ನು ಮುಚ್ಚಲಾಗುವುದು ಎಂದು ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್​ ತಿಳಿಸಿದ್ದಾರೆ.

    ಬಾಲರಾಮ ಪ್ರಾಣ ಪ್ರತಿಷ್ಠಾ ಬಳಿಕ ರಾಮ ಮಂದಿರಕ್ಕೆ ಪ್ರತಿದಿನ ಭಕ್ತರ ದಂಡು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಟ್ರಸ್ಟ್ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ದರ್ಶನದ ಸಮಯವನ್ನು ಹೆಚ್ಚಿಸಿದೆ. ಜನವರಿ 23ರಿಂದಲೂ ಬಾಲರಾಮನನ್ನು ಬೆಳಗಿನ ಪೂಜಾ ಕೈಂಕರ್ಯಗಳಿಗಾಗಿ 4 ಗಂಟೆ ಎಚ್ಚರಗೊಳಿಸಲಾಗುತ್ತಿದೆ. ಪೂಜಾ ವಿಧಾನಗಳು 2 ಗಂಟೆಗಳವರೆಗೂ ನಡೆಯುತ್ತದೆ. ಆ ಬಳಿಕ ರಾತ್ರಿ 10 ಗಂಟೆಯವರೆಗೂ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ ಎಂದು ಅರ್ಚಕರು ಹೇಳಿದರು.

    ಶ್ರೀ ರಾಮಲಲ್ಲಾ ಐದು ವರ್ಷದ ಮಗುವಾದ್ದರಿಂದ ಅವರು ತುಂಬಾ ಹೊತ್ತು ಎಚ್ಚರವಾಗಿದ್ದುಕೊಂಡು ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಾಲರಾಮನಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡಬೇಕಿದೆ. ಅದಕ್ಕಾಗಿ ದೇವಸ್ಥಾನದ ಟ್ರಸ್ಟ್​ ಒಂದು ನಿರ್ಧಾರಕ್ಕೆ ಬಂದಿದ್ದು, ಪ್ರತಿದಿನ ಮಧ್ಯಾಹ್ನ 12.30 ರಿಂದ 1.30ರವರೆಗೆ ಮಂದಿರವನ್ನು ಮುಚ್ಚಲಾಗುವುದು. ಈ ವೇಳೆ ದೇವರು ವಿಶ್ರಾಂತಿಯನ್ನು ಪಡೆಯಬಹುದು ಎಂದು ಅರ್ಚಕರು ಹೇಳಿದರು.

    ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ದರ್ಶನ ಸಮಯವನ್ನು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಿಗದಿ ಪಡಿಸಲಾಗಿತ್ತು. ಮಧ್ಯಾಹ್ನ 1.30 ರಿಂದ 3.30ರವರೆಗೆ ಎರಡು ಗಂಟೆಗಳ ಕಾಲ ವಿಶ್ರಾಂತಿ ಸಮಯವಿತ್ತು. (ಏಜೆನ್ಸೀಸ್​)

    ಭಾರತೀಯ ಕುಟುಂಬದ ದುರಂತ ಅಂತ್ಯದ ರಹಸ್ಯ ಬಯಲು: ಪತ್ನಿ, ಮಕ್ಕಳನ್ನು ಕೊಂದು ಸಾವಿಗೆ ಶರಣು

    ಉತ್ತಮ S*x ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ! ಅನುಪಮಾ ಡೈಲಾಗ್​ ಕೇಳಿ ಬೆರಗಾದ್ರು ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts