More

  ಭಾರತೀಯ ಕುಟುಂಬದ ದುರಂತ ಅಂತ್ಯದ ರಹಸ್ಯ ಬಯಲು: ಪತ್ನಿ, ಮಕ್ಕಳನ್ನು ಕೊಂದು ಸಾವಿಗೆ ಶರಣು

  ಕೊಲ್ಲಂ: ಅವಳಿ ಮಕ್ಕಳು ಸೇರಿದಂತೆ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರಂಭದಲ್ಲಿ ಎಸಿ ಅಥವಾ ವಾಟರ್​ ಹೀಟರ್​ನ ವಿಷಕಾರಿ ಅನಿಲವನ್ನು ಸೇವಿಸಿ ಮೃತಪಟ್ಟಿದ್ದಾರೆ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ತನಿಖೆಯಲ್ಲಿ ಆಘಾತಕಾತಿ ಮಾಹಿತಿ ಬಯಲಾಗಿದೆ.

  ಮೃತರನ್ನು ಆನಂದ್​ ಸುಜಿತ್​ ಹೆನ್ರಿ (38), ಆತನ ಪತ್ನಿ ಅಲೈಸ್​ ಪ್ರಿಯಾಂಕಾ (37), ಇಬ್ಬರು ಮಕ್ಕಳಾದ ನೋಹ್​ (4) ಮತ್ತು ನ್ಯಾಥನ್​ (4) ಎಂದು ಗುರುತಿಸಲಾಗಿದೆ. ಆನಂದ್​, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತಾನು ಸಾವಿಗೆ ಶರಣಾಗಿದ್ದಾನೆಂದು ಅಮೆರಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಅಲೈಸ್​ ಪ್ರಿಯಾಂಕಾ ದೇಹದಲ್ಲಿ ಗುಂಡಿನ ಗಾಯಗಳಿವೆ. ಆದರೆ ಮಕ್ಕಳಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಮನೆಯ ಬಾತ್​ರೂಮ್​ನಲ್ಲಿ 9 ಎಂಎಂ ಪಿಸ್ತೂಲ್​ ಪತ್ತೆಯಾಗಿದ್ದು, ಪತ್ನಿಯನ್ನು ಕೊಲೆ ಮಾಡಿ, ತಾನು ಗುಂಡು ಹಾರಿಸಿಕೊಂಡು ಆನಂದ್​ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಸಾವಿಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ಮುಂದುವರಿದಿದೆ.

  ಮೃತ ಆನಂದ್ ಅವರು ಕೊಲ್ಲಂನ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದ ಪಟ್ಟಠಾಣಂ ಮೂಲದ ಜಿ ಹೆನ್ರಿ ಮತ್ತು ಶಾಂತಮ್ಮ ಅವರ ಕಿರಿಯ ಪುತ್ರ. ಆರಂಭದಲ್ಲಿ ಎಸಿ ಅಥವಾ ವಾಟರ್​ ಹೀಟರ್​ನ ವಿಷಕಾರಿ ಅನಿಲವನ್ನು ಸೇವಿಸಿ ಸಾವು ಸಂಭವಿಸಿರಬಹುದೆಂದು ಹೇಳಲಾಗಿತ್ತು. ಅಮೆರಿಕದ ಕಾಲಮಾನ ಸೋಮವಾರ ಬೆಳಗ್ಗೆ 9.15ಕ್ಕೆ ಸ್ಯಾನ್ ಮಾಟಿಯೊದಲ್ಲಿರುವ ಮನೆಯೊಳಗಿನ ಕೋಣೆಯಲ್ಲಿ ನಾಲ್ವರ ಶವಗಳು ಪತ್ತೆಯಾಗಿದ್ದವು.

  ಅಲೈಸ್​ ಪ್ರಿಯಾಂಕಾಗೆ ಅವರ ತಾಯಿ ಎಷ್ಟೇ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಅಮೆರಿಕದಲ್ಲೇ ಇರುವ ಮತ್ತೊಬ್ಬ ಸಂಬಂಧಿಗೆ ತಾಯಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸಂಬಂಧಿ, ಪ್ರಿಯಾಂಕಾ ಮನೆಗೆ ಭೇಟಿ ನೀಡಿದರು. ಸಾಕಷ್ಟು ಬಾರಿ ಬಾಗಿಲು ಬಡಿದಾಗ ಯಾರೂ ಪ್ರತಿಕ್ರಿಯಿಸದಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.

  ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದು ನೋಡಿದಾಗ ನಾಲ್ವರ ಶವಗಳು ಪತ್ತೆಯಾಗಿದ್ದವು. ಪ್ರಕರಣ ದಾಖಲಿಸಿಕೊಂಡ ಸ್ಯಾನ್ ಮಾಟಿಯೊ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆನಂದ್​, ಪತ್ನಿ ಮತ್ತು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸದ್ಯಕ್ಕೆ ತಿಳಿದುಬಂದಿದೆ.

  ಆನಂದ್ ಮತ್ತು ಆಲಿಸ್ ಒಂಬತ್ತು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆನಂದ್ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಆಲಿಸ್ ಪ್ರಿಯಾಂಕಾ ಹಿರಿಯ ವಿಶ್ಲೇಷಕರಾಗಿದ್ದರು. ಎಂಟು ವರ್ಷಗಳ ಹಿಂದೆ ಕೊನೆಯದಾಗಿ ತಮ್ಮ ಊರಿಗೆ ಬಂದಿದ್ದರು. (ಏಜೆನ್ಸೀಸ್​)

  ಅಮೆರಿಕದಲ್ಲಿದ್ದ ಪುತ್ರಿಗೆ ಕರೆ ಮಾಡಿದ ತಾಯಿಗೆ ಕಾದಿತ್ತು ದೊಡ್ಡ ಆಘಾತ​! ಒಂದೇ ಕೋಣೆಯಲ್ಲಿ ಭೀಕರ ದೃಶ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts