More

    ಬಜೆಟ್​ನಲ್ಲಿ ಕೋಟಿ ತೆರಿಗೆದಾರರಿಗೆ ಪ್ರಯೋಜನ: ನಿರ್ಮಲಾ ಸೀತಾರಾಮನ್​ ಘೋಷಣೆಯಿಂದ ನಿಮಗೂ ಲಾಭವಾಗುವುದೇ?

    ನವದೆಹಲಿ: 2024-25ರ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಘೋಷಿಸಿಲ್ಲ, ಹೀಗಿದ್ದರೂ ಅಂದಾಜು ಒಂದು ಕೋಟಿ ತೆರಿಗೆದಾರರು ಪ್ರಸ್ತುತ ಬಜೆಟ್​ ಮೂಲಕ ಪ್ರಯೋಜನ ಪಡೆಯುವ ಸಾಧ್ಯತೆಯಿದೆ.

    ಏಕೆಂದರೆ, 2009-10ನೇ ಹಣಕಾಸು ವರ್ಷದವರೆಗೆ 25,000 ರೂ.ವರೆಗಿನ ಹಳೆಯ ಮತ್ತು ವಿವಾದಿತ ನೇರ ತೆರಿಗೆಗಳ ವಸೂಲಾತಿಯನ್ನು ಸರ್ಕಾರ ಮುಂದುವರಿಸುವುದಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ. ಇದಲ್ಲದೆ, 2010-11 ರಿಂದ 2014-15 ರ ಹಣಕಾಸು ವರ್ಷಗಳವರೆಗೆ 10,000 ರೂ.ವರೆಗಿನ ನೇರ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

    “ತೆರಿಗೆದಾರರ ಸೇವೆಗಳನ್ನು ಸುಧಾರಿಸಲು ನಾನು ಪ್ರಕಟಣೆಯನ್ನು ಮಾಡಲು ಬಯಸುತ್ತೇನೆ. ಹೆಚ್ಚಿನ ಸಂಖ್ಯೆಯ ಸಣ್ಣಪುಟ್ಟ, ಪರಿಶೀಲಿಸದ, ರಾಜಿ ಮಾಡಿಕೊಳ್ಳದ ಅಥವಾ ವಿವಾದಿತ ನೇರ ತೆರಿಗೆ ಬೇಡಿಕೆಗಳಿವೆ, ಇವುಗಳಲ್ಲಿ ಹಲವು 1962ರಿಂದಲೂ ಪುಸ್ತಕದಲ್ಲಿ ಉಳಿದಿವೆ. ಇವು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಆತಂಕ ಉಂಟು ಮಾಡುತ್ತಿದ್ದು, ನಂತರದ ವರ್ಷಗಳಲ್ಲಿ ಮರುಪಾವತಿಗೆ ಅಡ್ಡಿ ಮಾಡುತ್ತಿವೆ” ಎಂದು ಸೀತಾರಾಮನ್ ಹೇಳಿದರು.

    “2009-10ರ ಹಣಕಾಸು ವರ್ಷದವರೆಗಿನ ಅವಧಿಗೆ ಸಂಬಂಧಿಸಿದಂತೆ ಇಪ್ಪತ್ತೈದು ಸಾವಿರ ರೂಪಾಯಿಗಳವರೆಗೆ ಮತ್ತು 2010-11ರಿಂದ 2014-15ರ ಹಣಕಾಸು ವರ್ಷಗಳವರೆಗೆ ಹತ್ತು ಸಾವಿರ ರೂಪಾಯಿಗಳವರೆಗೆ ಬಾಕಿ ಉಳಿದಿರುವ ನೇರ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲು ನಾನು ಪ್ರಸ್ತಾಪಿಸುತ್ತೇನೆ. ಇದು ಅಂದಾಜು ಒಂದು ಕೋಟಿ ತೆರಿಗೆದಾರರಿಗೆ ಪ್ರಯೋಜನ ನೀಡುತ್ತದೆ” ಎಂದು ಅವರು ಹೇಳಿದರು.

    ಬಜೆಟ್​ನಲ್ಲಿ ಆದಾಯ ತೆರಿಗೆ ಯಥಾಸ್ಥಿತಿ: ಚುನಾವಣೆ ಹೊಸ್ತಿಲಲ್ಲೇ ಮಧ್ಯಮ ವರ್ಗದವರಿಗೆ ನಿರಾಸೆ ಆಗಿದ್ದೇಕೆ?

    ಗರಿಷ್ಠ ಮಟ್ಟ ಮುಟ್ಟಿದ ಟಾಟಾ ಪವರ್​ ಷೇರು ಬೆಲೆ: ಪ್ರೈಸ್​ ಇನ್ನೂ ಜಾಸ್ತಿಯಾಗಲಿದೆ ಎಂದು ಬ್ರೋಕರೇಜ್​ ಸಂಸ್ಥೆಗಳು ಹೇಳುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts