More

    ಗರಿಷ್ಠ ಮಟ್ಟ ಮುಟ್ಟಿದ ಟಾಟಾ ಪವರ್​ ಷೇರು ಬೆಲೆ: ಪ್ರೈಸ್​ ಇನ್ನೂ ಜಾಸ್ತಿಯಾಗಲಿದೆ ಎಂದು ಬ್ರೋಕರೇಜ್​ ಸಂಸ್ಥೆಗಳು ಹೇಳುತ್ತಿರುವುದೇಕೆ?

    ಮುಂಬೈ: ಟಾಟಾ ಗ್ರೂಪ್​ಗೆ ಸೇರಿದ ಟಾಟಾ ಪವರ್‌ನ ಷೇರುಗಳ ಮೇಲೆ ಬ್ರೋಕರೇಜ್‌ ಸಂಸ್ಥೆಗಳು ಒಲವು ತೋರುತ್ತಿವೆ. ಆಂಟಿಬ್ಸ್ ಬ್ರೋಕರೇಜ್ ಸಂಸ್ಥೆ ವಿಶ್ಲೇಷಕರು ಟಾಟಾ ಪವರ್ ಷೇರಿನ ಮೇಲೆ ತಮ್ಮ ಗುರಿ ಬೆಲೆಯನ್ನು ಹಿಂದಿನ ರೂ 422 ರಿಂದ ರೂ 450 ಕ್ಕೆ ಏರಿಸಿದ್ದಾರೆ.

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್‌ನಲ್ಲಿ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಇದರ ಪರಿಣಾಮ ಇಂಧನ ಕ್ಷೇತ್ರದ ಕೆಲವು ಷೇರುಗಳ ಮೇಲೆ ಉಂಟಾಗಲಿದೆ.

    ಏತನ್ಮಧ್ಯೆ, ಗುರುವಾರ, ಹೂಡಿಕೆದಾರರು ಎನರ್ಜಿ ಸ್ಟಾಕ್ ಮೇಲೆ ಬಾಜಿ ಕಟ್ಟುತ್ತಿದ್ದಾರೆ. ಟಾಟಾ ಪವರ್ ಷೇರಿನ ಬೆಲೆ ಗುರುವಾರದಂದು ರೂ 396.70 ರ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದೆ, ಇದು ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಹಿಂದಿನ ದಿನವಾದ ಬುಧವಾರ ಈ ಷೇರಿನ ಬೆಲೆ ರೂ 389.65 ಆಗಿತ್ತು. ಈ ಷೇರು ಮಾರ್ಚ್ 2023 ರಲ್ಲಿ 52 ವಾರದ ಕನಿಷ್ಠ ಬೆಲೆಯಾದ 182.45 ರೂಪಾಯಿ ತಲುಪಿತ್ತು.

    ಟಾಟಾ ಪವರ್ ಷೇರುಗಳ ಮೇಲೆ ಬ್ರೋಕರೇಜ್‌ ಸಂಸ್ಥೆಗಳು ಆಸಕ್ತಿ ತೋರುತ್ತಿವೆ. ಆಂಟಿಬ್ಸ್ ಬ್ರೋಕಿಂಗ್‌ನ ವಿಶ್ಲೇಷಕರು ಟಾಟಾ ಪವರ್ ಸ್ಟಾಕ್‌ಗೆ ತಮ್ಮ ಗುರಿ ಬೆಲೆಯನ್ನು ಹಿಂದಿನ ರೂ 422 ರಿಂದ 450 ರೂ.ಗೆ ಹೆಚ್ಚಿಸಿದ್ದಾರೆ. ಇದೂ ಕೂಡ ಷೇರುಗಳ ಏರಿಕೆಗೆ ಕಾರಣವಾಗಿದೆ.

    ಟಾಟಾ ಪವರ್ ಷೇರುಗಳ ಏರಿಕೆಗೆ ಹಲವು ಕಾರಣಗಳಿವೆ. ಟಾಟಾ ಪವರ್‌ನ ಅಂಗಸಂಸ್ಥೆ – ಟಾಟಾ ಪವರ್ ರಿನ್ಯೂವಬಲ್ ಎನರ್ಜಿ ಜತೆಗೆ ಏಷ್ಯಾದ ಅತಿದೊಡ್ಡ ಟೀ ಎಸ್ಟೇಟ್ ಆಗಿರುವ ಚೆಂಗ್ಮರಿ ಟೀ ಎಸ್ಟೇಟ್, 1040 KW ಬೈಫೇಶಿಯಲ್ ಸೋಲಾರ್ ಸಿಸ್ಟಮ್ ಪ್ರಾಜೆಕ್ಟ್ ಯಶಸ್ವಿಯಾಗಿ ಕಾರ್ಯಾರಂಭಗೊಂಡಿದೆ.

    ಟಾಟಾ ಪವರ್​ ಷೇರು ಬೆಲೆ ಕಳೆದ ಮೂರು ತಿಂಗಳಲ್ಲಿ 64.80% ರಷ್ಟು ಏರಿಕೆ ದಾಖಲಿಸಿದೆ. ಒಂದು ವರ್ಷದಲ್ಲಿ ಶೇ. 89.48% ಮತ್ತು 3 ವರ್ಷದಲ್ಲಿ 388.17% ಏರಿಕೆಯಾಗಿದೆ.

    ಇದಲ್ಲದೆ, ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಘೋಷಣೆಯ ನಂತರ, ಹೂಡಿಕೆದಾರರು ನವೀಕರಿಸಬಹುದಾದ ಇಂಧನದಲ್ಲಿ ಟಾಟಾ ಪವರ್ ಷೇರುಗಳನ್ನು ತಮ್ಮ ಉನ್ನತ ಆಯ್ಕೆಯಾಗಿ ಮಾಡಿಕೊಂಡಿದ್ದಾರೆ. ಈ ಯೋಜನೆಯನ್ನು ಜನವರಿಯಲ್ಲಿ ಘೋಷಿಸಲಾಗಿದೆ. ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ಹಣಕಾಸು ಸಚಿವರು, ಮೇಲ್ಛಾವಣಿಯ ಸೋಲಾರ್ ಸಿಸ್ಟಮ್ ಅನ್ನು ಸ್ಥಾಪಿಸುವ ಮೂಲಕ, ಒಂದು ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯೂನಿಟ್​ವರೆಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ಕುಟುಂಬಗಳಿಗೆ ಪ್ರತಿ ವರ್ಷ ಹದಿನೈದು ಸಾವಿರದಿಂದ ಹದಿನೆಂಟು ಸಾವಿರ ರೂಪಾಯಿ ಉಳಿತಾಯವಾಗುತ್ತದೆ ಎಂಬ ಅಂದಾಜಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts