ಕರೊನಾದಿಂದ ಸಹೋದರ ಸಾವು: ಅಣ್ಣನ ಹೆಂಡತಿಯನ್ನು ವಿವಾಹವಾಗಿ ಬದುಕಿಗೆ ಆಸರೆಯಾದ ತಮ್ಮ

Marriage
Published on

ಬೆಳಗಾವಿ: ಮಹಾಮಾರಿ ಕರೊನಾ ವೈರಸ್​ ಸೋಂಕಿಗೆ ಅಣ್ಣ ಮೃತಪಟ್ಟ ಬಳಿಕ ವಿಧವೆಯಾಗಿದ್ದ ಆತನ ಹೆಂಡತಿಯನ್ನು ಮದುವೆಯಾಗುವ ಮೂಲಕ ಆಕೆಯ ಬದುಕಿಗೆ ತಮ್ಮ ಆಸರೆಯಾಗಿದ್ದಾನೆ.

ಈ ವಿನೂತನ ಮದುವೆಗೆ ಮಹಾರಾಷ್ಟ್ರದ ಅಕೋಲೆ ತಾಲೂಕಿನ ಧೋಕ್ರಿಯ ಸಾಕ್ಷಿಯಾಗಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ 31 ವರ್ಷದ ನೀಲೇಶ್​ ಸೇಠ್​ ಬಲಿಯಾಗಿದ್ದ. ಗಂಡನನ್ನು ಕಳೆದುಕೊಂಡು 23 ವರ್ಷದ ಪೂನಂ ಹಾಗೂ ಆಕೆಯ 19 ತಿಂಗಳ ಮಗು ಆಸರೆಯಿಲ್ಲದಂತಾಗಿದ್ದರು.

ಇದೀಗ ಗ್ರಾಮಸ್ಥರ ಸಮ್ಮುಖದಲ್ಲಿ ನೀಲೇಶ್​ ಸಹೋದರ ಸಮಾಧಾನ್​ ಪೂನಂ ಕೈ ಹಿಡಿಯುವ ಮೂಲಕ ಅವರ ಬದುಕಿಗೆ ಆಸೆಯಾಗಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಪರಸ್ಪರ ಒಪ್ಪಿಗೆಯಿಂದಲೇ ಇಬ್ಬರು ಸಪ್ತಪದಿ ತುಳಿದಿದ್ದಾರೆ.

ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಪೂನಂ‌ ಹಾಗೂ ಸಮಾಧಾನ್​ಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ. ಅಲ್ಲದೆ, ಸಮಾಧಾನ್​ ನಡೆಗೆ ಸಾಕಷ್ಟು ಮೆಚ್ಚುಗೆಗಳು ಕೂಡ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net