ಬಾಹುಬಲಿಯಂತೆ ಸ್ಕಾರ್ಪಿಯೋ ವಾಹನ ಎಳೆದ ಸಿಪಿಐ! ಕಾರು ಎಳೆಯಲು ಕಾರಣವೂ ಇದೆ

Koppal CPI
Published on

ಕೊಪ್ಪಳ: ಪೊಲೀಸ್​ ಹುದ್ದೆಗೆ ಸೇರುವ ಮುನ್ನ ಇದ್ದಂತಹ ದೈಹಿಕ ಸಾಮರ್ಥ್ಯವು ಕೆಲಸಕ್ಕೆ ಸೇರಿದ ಬಳಿಕ ಬಹುತೇಕರಿಗೆ ಇರಲಿಲ್ಲ. ಏಕೆಂದರೆ, ಇಲಾಖೆಯಲ್ಲಿ ಹೊಟ್ಟೆ ಬಿಟ್ಟುಕೊಂಡ ಪೊಲೀಸರೇ ಹೆಚ್ಚು. ಆದರೆ, ಇಂಥವರ ನಡುವೆ ದೈಹಿಕ ಸಾಮರ್ಥ್ಯ ಕಾಪಾಡಿಕೊಂಡು ಬಂದವರು ಇರುತ್ತಾರೆ ಎಂಬದಕ್ಕೆ ಈ ಘಟನೆ ತಾಜಾ ಉದಾಹರಣೆ.

ಹೌದು. ಕೊಪ್ಪಳದ ಸಿಪಿಐ, ಬಾಹುಬಲಿಯಂತೆ ಸ್ಕಾರ್ಪಿಯೋ ಕಾರು ಎಳೆದು ಎಲ್ಲರ ಹುಬ್ಬೇರಿಸಿದ್ದಾರೆ. ಯಲಬುರ್ಗಾ ಸಾರ್ವಜನಿಕರ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ.

ಯಲಬುರ್ಗಾ ಸಿಪಿಐ ನಾಗಾರೆಡ್ಡಿ ಅವರು ಕರ್ತವ್ಯದ ಮೇಲೆ ಆಸ್ಪತ್ರೆಯ ಶವಾಗಾರಕ್ಕೆ ಬರುವಾಗ ಮಾರ್ಗ ಮಧ್ಯ ವಾಹನ ಕೈಕೊಟ್ಟಿದೆ. ಚಾಲಕ ಮೆಕಾನಿಕ್ ಕರೆದುಕೊಂಡು ಬರಲು ಹೋಗಿದ್ದಾಗ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಆಗದಿರಲೆಂದು ಸಿಪಿಐ ನಾಗರೆಡ್ಡಿ ಕಾರು ಎಳೆದು ಸಾಹಸ ಮೆರೆದಿದ್ದಾರೆ.

ಸಿಪಿಐ ವಾಹನ ಎಳೆಯುತ್ತಿರೋ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net