ದಮ್ಮಯ್ಯಾ.. ಅಂತೀನಿ ಬಿಟ್ಬಿಡಿ, ನನ್​ ಕೈಯಲ್ಲಿ ಆಗ್ತಿಲ್ಲ..!

1126970
Published on

ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಸಾರಿಗೆ ಸಿಬ್ಬಂದಿಯೊಬ್ಬರು ಹರಸಾಹಸ ಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕರೊನಾ ಪರೀಕ್ಷೆಗೆಂದು ಮುಂದಾಗುತ್ತಿದ್ದಂತೆ ಮೂಗು ಮತ್ತು ಬಾಯಿ ಹಿಂತೆಗೆದುಕೊಂಡು ಸತಾಯಿಸುತ್ತಿರುವ ನೌಕರನ ವಿಡಿಯೋವನ್ನು ಸ್ವತಃ ಆತನ ಸಹೋದ್ಯೋಗಿಗಳು ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ವಿಡಿಯೋ ಸೆರೆಹಿಡಿದ ಖಚಿತ ಸ್ಥಳದ ಬಗ್ಗೆ ಮಾಹಿತಿ ಇಲ್ಲ. ಆದರೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಈ ಪ್ರಸಂಗ ಜರುಗಿದೆ.

ಅನ್​ಲಾಕ್ ಹಿನ್ನಲೆಯಲ್ಲಿ ಸಾರಿಗೆ ಬಸ್​ಗಳ ಓಡಾಟಕ್ಕೆ ಇಲಾಖೆ ಮುಂದಾಗಿದೆ. ಹೀಗಾಗಿ ಡ್ಯೂಟಿಗೆ ಹಾಜರಾಗಬೇಕು ಅಂದರೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಆದರೆ, ಟೆಸ್ಟ್ ಮಾಡಿಸಪ್ಪ ಅಂದ್ರೆ ನೌಕರ ಹಿಂದೇಟು ಹಾಕುತ್ತಿದ್ದು, ಅದನ್ನು ನೋಡಿ ಸಹೋದ್ಯೋಗಿಗಳು ನಗುತ್ತಿದ್ದಾರೆ.

ಸತತ ಐದು ನಿಮಿಷ ಟೆಸ್ಟ್ ಮಾಡಿಸದೆ ಸಿಬ್ಬಂದಿ ಆಟ ಆಡಿಸಿದ್ದಾರೆ. ಕೊನೆಗೆ ಮತ್ತೊಬ್ಬ ಸಿಬ್ಬಂದಿ ಸಹಾಯದ ಮೂಲಕ ಆರೋಗ್ಯ ಸಿಬ್ಬಂದಿ ಟೆಸ್ಟ್​ ಮಾಡಿ, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net