ಪ್ರಖ್ಯಾತ ವಿದ್ವಾಂಸ, ವಿಜಯವಾಣಿ ಅಂಕಣಕಾರ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಇನ್ನಿಲ್ಲ

K S Narayanacharya
Published on

ಬೆಂಗಳೂರು: ಪ್ರಖ್ಯಾತ ವಿದ್ವಾಂಸರು ಹಾಗೂ ನಮ್ಮ ವಿಜಯವಾಣಿ ಅಂಕಣಕಾರರೂ ಆಗಿದ್ದ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು (86) ತಡರಾತ್ರಿ 2 ಗಂಟೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ನಿಧನದ ಸುದ್ದಿಯನ್ನು ನಾರಾಯಣಚಾರ್ಯರ ಕುಟುಂಬ ತಿಳಿಸಿದೆ. ಪೂಜ್ಯ ಶ್ರೀ ಕಾನಕಾನ್ಹಳ್ಳಿ ಶ್ರೀನಿವಾಸ ದೇಶಿಕಾಚಾರ್ಯ ನಾರಾಯಣಾಚಾರ್ಯರು ( ಡಾ. ಕೆ.ಎಸ್.ಎನ್) ಇಂದು ಬೆಳಗಿನ ಜಾವ 2.06 ಗಂಟೆಗೆ ಆಚಾರ್ಯರ ತಿರುವಡಿಗಳ ಮೂಲಕ ಭಗವಂತನ ಪಾದಕಮಲಗಳನ್ನು ಸೇರಿದರೆಂದು ತಿಳಿಸಲು ವಿಷಾದಿಸುತ್ತೇವೆ. ಅಂತ್ಯೇಷ್ಟಿಗಳು ಪೂಜ್ಯರ ಸ್ವಗೃಹದಲ್ಲಿ ನಡೆಯುತ್ತವೆ ಎಂದು ಕುಟುಂಬ ಹೇಳಿದೆ.

ಬೆಂಗಳೂರಿನ ನ್ಯೂ ಬಿಇಎಲ್​ ರಸ್ತೆಯಲ್ಲಿರುವ ಜಲದರ್ಶಿನಿ ಲೇಔಟ್​ನಲ್ಲಿರುವ ನಾರಾಯಣಾಚಾರ್ಯರ ನಿವಾಸದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿದೆ.

ನಾರಾಯಣಾಚಾರ್ಯ ಅವರು 1933 ಅಕ್ಟೋಬರ್ 30 ರಂದು ಕನಕನಹಳ್ಳಿಯಲ್ಲಿ (ಈಗಿನ ಕನಕಪುರ, ಕರ್ನಾಟಕ, ಬೆಂಗಳೂರು ಜಿಲ್ಲೆ) ಕೆ.ಎನ್ ಶ್ರೀನಿವಾಸ ದೇಶಿಕಾಚಾರ್ಯ ಮತ್ತು ರಂಗನಾಯಕಮ್ಮ ದಂಪತಿಗಳಿಗೆ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮತ್ತು ಯುವರಾಜ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಬಿಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ), ಬಿ.ಎ. (ಆನರ್ಸ್) ಇಂಗ್ಲಿಷ್, ಮತ್ತು ಎಂಎ (ಆಧುನಿಕ ಇಂಗ್ಲಿಷ್ ಸಾಹಿತ್ಯ) ಮಾಡಿದ್ದಾರೆ.

"ಡಬ್ಲ್ಯೂಬಿ ಯೀಟ್ಸ್ ಮತ್ತು ಟಿಎಸ್ ಎಲಿಯಟ್ ಅವರ ಕಾವ್ಯದ ಮೇಲೆ ಭಾರತೀಯ ಚಿಂತನೆಯ ಪ್ರಭಾವ" ಎಂಬ ವಿಷಯದ ಮೇಲೆ ನಾರಾಯಣಾಚಾರ್ಯ ಅವರು ಡಾಕ್ಟರೇಟ್ ಪ್ರಬಂಧ (ಯುಜಿಸಿ ಫೆಲೋಶಿಪ್ 1959–1961) ಮಂಡಿಸಿದ್ದಾರೆ. ಕೆಎಸ್‌ಎನ್ ಒಬ್ಬ ವಿದ್ವತ್ಪೂರ್ಣ ವಿದ್ವಾಂಸರಾಗಿದ್ದು, ಅವರ ಮುಖ್ಯವಾಗಿ ರಾಷ್ಟ್ರೀಯತೆಯತೆಗೆ ಒತ್ತು ಕೊಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net