More

    ಹವಾಮಾನ ನೀತಿ ಅಗತ್ಯ ನೆನಪಿಸಿದ ಮಳೆ; ವಿಕೋಪ ತಡೆಗೆ ಬೇಕು ಪ್ರತ್ಯೇಕ ಸಂಸ್ಥೆ, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಅಕಾಲಿಕ ಮಳೆ ರಾಜ್ಯವನ್ನು ನಡುಗಿಸಿರುವ ಸಂದರ್ಭದಲ್ಲೇ ಹವಾಮಾನ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಆಗಲಿರುವ ಭೀಕರ ದುಷ್ಪರಿಣಾಮಗಳ ಆತಂಕವೂ ದಟ್ಟೆ ೖಸಲಾರಂಭಿಸಿದೆ. ಆದರೆ, ಇದನ್ನೆಲ್ಲ ತಡೆಗಟ್ಟಲು ಅಗತ್ಯವಾಗಿರುವ ಪ್ರತ್ಯೇಕ ನೀತಿಯೊಂದನ್ನು ರೂಪಿಸಿ, ಅದರ ಅನುಷ್ಠಾನಕ್ಕೆ ಸಂಸ್ಥೆಯೊಂದನ್ನು ಹುಟ್ಟುಹಾಕುವಂತೆ ತಜ್ಞರು ನೀಡಿರುವ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಈ ವಿಚಾರದಲ್ಲಿ ಉಳಿದೆಲ್ಲ ರಾಜ್ಯಗಳಿಗಿಂತ ಮುಂದಿರುವ ತಮಿಳುನಾಡು ಈಗಾಗಲೇ ಗ್ರೀನ್ ಕ್ಲೈಮೆಟ್ ಕಂಪನಿ ಸ್ಥಾಪಿಸಿ ಕಾರ್ಯೋನ್ಮುಖವಾಗಿದೆ. ರಾಜ್ಯದಲ್ಲಿ ಮಾತ್ರ ಹವಾಮಾನ ಬದಲಾವಣೆ ಬಗ್ಗೆ ಈವರೆಗೂ ಇಲಾಖೆಗಳ ನಡುವೆ ಕನಿಷ್ಠ ಚರ್ಚೆಯೂ ನಡೆದಿಲ್ಲ.

    ಒಪ್ಪಿಗೆ ನಿರೀಕ್ಷೆ: ತಜ್ಞರಿಂದ ವಿಷಯವಾರು ಲೇಖನ ಬರೆಸಿರುವ ಸರ್ಕಾರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯನ್ನು ಕೇಂದ್ರಕ್ಕೆ ರವಾನಿಸಿದೆ. ಇಂಧನ, ಸಾರಿಗೆ, ಕೃಷಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ, ಅರಣ್ಯ, ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ತಜ್ಞರ ವರದಿಗಳು ಕ್ರಿಯಾ ಯೋಜನೆಯಲ್ಲಿವೆ.

    ರಾಜ್ಯದ ಈ ಕ್ರಿಯಾ ಯೋಜನೆಗೆ ಕೇಂದ್ರ ಶೀಘ್ರ ಒಪ್ಪಿಗೆ ನೀಡುವ ನಿರೀಕ್ಷೆ ಇದೆ. ಇದಾದ ನಂತರ ಅನುಷ್ಠಾನ ಹೇಗಿರಬೇಕೆಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯನ್ನು ಶೀಘ್ರ ನಡೆಸಬೇಕಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ರಾಜ್ಯದ ಕ್ರಿಯಾ ಯೋಜನೆಯನ್ನು ಕೇಂದ್ರಕ್ಕೆ ಕಳುಹಿಸಿದೆ.

    ಬೇಕಿದೆ ಪ್ರತ್ಯೇಕ ನೀತಿ: ಕೇಂದ್ರ ಕ್ರಿಯಾ ಯೋಜನೆ ಅನುಮೋದಿಸಿದರೂ ಅದರ ಜಾರಿಗೆ ಪೂರಕವಾಗಿ ಕ್ರಿಯಾ ಯೋಜನೆ ರೂಪಿಸಬೇಕು. ಅದರ ಜಾರಿಗೆ ಪ್ರತ್ಯೇಕ ಸಂಸ್ಥೆ ರಚಿಸಿ ವಿವಿಧ ಇಲಾಖೆಗಳು ತಮ್ಮ ಯೋಜನೆಗಳನ್ನು ಅದರ ಮೂಲಕ ಜಾರಿಗೆ ತರಬೇಕೆಂಬುದು ತಜ್ಞರ ಸಲಹೆಯಾಗಿದೆ.

    ಪ್ರತ್ಯೇಕ ಬಜೆಟ್ ಏಕೆ?: ರಾಜ್ಯದ ಅಂದಾಜಿನ ಪ್ರಕಾರ 2025ರ ವೇಳೆಗೆ ಸುಮಾರು 25 ಸಾವಿರ ಕೋಟಿ ರೂ. ಹಾಗೂ 2030ರ ವೇಳೆಗೆ 53 ಸಾವಿರ ಕೋಟಿ ರೂ. ಅಗತ್ಯ ಬೀಳುತ್ತದೆ. ಆದ್ದರಿಂದ ಸರ್ಕಾರ ಪ್ರತ್ಯೇಕ ಬಜೆಟ್ ರೂಪಿಸಲೇಬೇಕಾಗುತ್ತದೆ ಎಂಬುದು ಪರಿಸರ ಆರ್ಥಿಕ ತಜ್ಞರ ಅಭಿಪ್ರಾಯ. ರಾಜ್ಯವೇ ಇಷ್ಟು ದೊಡ್ಡ ಮೊತ್ತ ಭರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ವಿಶ್ವಬ್ಯಾಂಕ್ ಸೇರಿದಂತೆ ಬೇರೆ ಬೇರೆ ಕಡೆಯಿಂದ ಸಾಲ ಪಡೆಯಬೇಕಾಗುತ್ತದೆ. ಕೇಂದದ ಅನುದಾನವನ್ನೂ ಬಳಸಬೇಕಾಗುತ್ತದೆ.

    ಇಲಾಖೆಗಳ ಕರ್ತವ್ಯಗಳೇನು?

    • ಕೃಷಿ ಇಲಾಖೆ: ಬೆಳೆ ಪದ್ಧತಿ ಬದಲಾವಣೆ, ರಸಗೊಬ್ಬರಗಳ ಬಳಕೆ ಕಡಿಮೆ, ಕಡಿಮೆ ನೀರಿನ ಬೆಳೆಗಳ ಬಗ್ಗೆ ಪ್ರಚಾರ, ಕೃಷಿ ಬೆಳೆಗಳ ವೈವಿಧ್ಯತೆಗಳಲ್ಲಿ ಬದಲಾವಣೆ ಮಾಡುವುದು
    • ಸಾರಿಗೆ: ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳ, ಎಲೆಕ್ಟ್ರಿಕ್ ಚಾರ್ಜಿಂಗ್ ಘಟಕಗಳ ಸ್ಥಾಪನೆ, ಸಾರಿಗೆ ಸಂಸ್ಥೆಯಲ್ಲಿ ಡೀಸೆಲ್ ಬಸ್​ಗಳ ಸಂಖ್ಯೆ ಇಳಿಕೆ
    • ಜಲ ಸಂಪನ್ಮೂಲ: ಕೆರೆಗಳ ಅಭಿವೃದ್ಧಿ, ಜಲಮೂಲಗಳ ಸಂರಕ್ಷಣೆ
    • ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ: ಕಸ ವಿಲೇವಾರಿ, ಮರು ಬಳಕೆ, ಕಾಂಪೋಸ್ಟ್ ತಯಾರಿ, ನರೇಗಾದಲ್ಲಿ ಆಸ್ತಿಗಳ ಸೃಜನೆ
    • ಪಶು ಸಂಗೋಪನೆ : ಹೈಬ್ರಿಡ್ ಹಸುಗಳ ಸಂಖ್ಯೆ ತಗ್ಗಿಸುವುದು, ನಾಟಿ ತಳಿಗಳ ಸಂಖ್ಯೆ ಹೆಚ್ಚಳ, ಮೇವು ಬೆಳೆಸುವಲ್ಲಿ ಹೊಸ ತಂತ್ರಜ್ಞಾನ, ಮೀನುಗಾರಿಕೆಯಲ್ಲಿಯೂ ನಿಯಂತ್ರಣ
    • ಅರಣ್ಯ: ಹೆಚ್ಚು ಮರ ಬೆಳೆಸುವುದು, ಅರಣ್ಯ ಕವಚ ಹೆಚ್ಚಿಸುವುದು, ಜೀವ ವೈವಿಧ್ಯತೆ ಉಳಿಸುವುದು
    • ಇಂಧನ: ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ತಗ್ಗಿಸುವುದು ನವೀಕರಿಸುವ ಇಂಧನ ಬಳಕೆ ಜಾಸ್ತಿ ಮಾಡುವುದು, ಡೀಸೆಲ್, ಪೆಟ್ರೋಲ್​ನಲ್ಲಿ ಎಥೆನಾಲ್ ಬಳಕೆ ಹೆಚ್ಚಿಸುವುದು, ಡೀಸೆಲ್ ಹೆಚ್ಚು ಬಳಸುವ ಕೈಗಾರಿಕೆಗಳು ನವೀಕರಿಸುವ ಇಂಧನ ಬಳಕೆಗೆ ಪ್ರೋತ್ಸಾಹ ನೀಡುವುದು.

    ವೈಪರೀತ್ಯದ ಪರಿಣಾಮ?

    • ಮಳೆ ಮಾರುತಗಳ ವ್ಯತ್ಯಾಸದಿಂದಾಗಿ ಬರ, ಪ್ರವಾಹ ಹೆಚ್ಚಳ
    • ತಗ್ಗಲಿದೆ ಕೃಷಿ ಭೂಮಿ, ಕೃಷಿ ಉತ್ಪಾದಕತೆ ಇಳಿಕೆ
    • ಶೀತ, ಕಫ, ಜ್ವರ, ಪ್ರಾಣಿಗಳಿಂದ ಬರುವ ಕಾಯಿಲೆಗಳು ಹೆಚ್ಚಳ
    • ಮೇಲ್ಮೈ ನೀರಿನ ಜತೆಗೆ ಅಂತರ್ಜಲವೂ ಶೇ. 25 ರಿಂದ 30 ಕಡಿಮೆಯಾಗಿ ಕುಡಿಯುವ ನೀರಿಗೆ ಹಾಹಾಕಾರ
    • ಚಿಟ್ಟೆ, ಕೀಟ ಕಡಿಮೆಯಾಗಿ ಪರಾಗಸ್ಪರ್ಶ ಇಲ್ಲದಂತಾಗಿ ಹಣ್ಣುಗಳ ಉತ್ಪಾದನೆ ಇಳಿಕೆ
    • ಮೀನುಗಾರಿಕೆ ದಿನಗಳ ಸಂಖ್ಯೆ ಇಳಿಕೆ, ಕಾಡ್ಗಿಚ್ಚು ಹೆಚ್ಚುವ ಸಾಧ್ಯತೆ
    • ಬಡತನ ರೇಖೆಗಿಂದ ಕೆಳಗಿನವರ ಸಂಖ್ಯೆಯಲ್ಲಿ ಹೆಚ್ಚಳ
    • ಕರಾವಳಿಯಲ್ಲಿ ಕಡಲ ಕೊರೆತ ಹೆಚ್ಚಳ
    • ರಸ್ತೆ, ಸೇತುವೆ, ವಿದ್ಯುತ್, ಅಣೆಕಟ್ಟೆಯಂತಹ ಮೂಲಸೌಕರ್ಯಗಳಿಗೆ ಹಾನಿ
    • ಬಹುತೇಕ ನಗರಗಳಿಗೆ ಪ್ರವಾಹದ ಭೀತಿ
    • ಮೇವಿನ ಉತ್ಪಾದನೆ ಕುಸಿತ

    ಎಂಪ್ರಿ ಹೇಳುವುದೇನು?

    • ಕ್ರಿಯಾ ಯೋಜನೆ ಒಪ್ಪಿಗೆ ಸಿಕ್ಕ ಕೂಡಲೇ ಅನುಷ್ಠಾನ
    • ವಿವಿಧ ಇಲಾಖೆಗಳನ್ನು ಸಿದ್ಧಗೊಳಿಸುವ ಕಾರ್ಯ
    • ಯೋಜನಾ ವರದಿಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಇಲಾಖೆಗಳಿಗೆ ಸೂಚನೆ
    • ವಿವಿಧ ಮೂಲಗಳಿಂದ ಹಣಕಾಸು ಪಡೆಯುವ ಯತ್ನ

    ರಾಜ್ಯ ಸರ್ಕಾರಕ್ಕೆ ಹವಾಮಾನ ಬದಲಾವಣೆ ಪರಿಣಾಮಗಳ ಗಂಭೀರತೆ ಇಲ್ಲ. ಪ್ರತ್ಯೇಕ ನೀತಿ ಸಿದ್ಧಪಡಿಸಬೇಕು, ಜಾರಿಗೆ ಪ್ರತ್ಯೇಕ ಸಂಸ್ಥೆಯಾಗಬೇಕು, ಪ್ರತ್ಯೇಕ ಬಜೆಟ್ ಇಡಬೇಕು. ಆದರೆ ಸರ್ಕಾರದ ಹಂತದಲ್ಲಿ ಇದರ ಚರ್ಚೆಗಳೇ ನಡೆದ ಮಾಹಿತಿ ಇಲ್ಲ.

    | ಪ್ರೊ. ಕೃಷ್ಣರಾಜು ಪರಿಸರ ಆರ್ಥಿಕ ತಜ್ಞ

    ತಜ್ಞರೆಲ್ಲ ಕ್ರಿಯಾ ಯೋಜನೆಗೆ ವರದಿ ಸಿದ್ಧಪಡಿಸಿಕೊಟ್ಟಿದ್ದೇವೆ. ಆದರೆ ಅದರ ಫಾಲೋಅಪ್ ಆಗುತ್ತಿಲ್ಲ. ಯಾವ ಪ್ರಮಾಣದಲ್ಲಿ ಸರ್ಕಾರ ಹವಾಮಾನ ಬದಲಾವಣೆ ಪರಿಣಾಮ ಎದುರಿಸಲು ಸಜ್ಜಾಗಬೇಕಾಗಿತ್ತೋ ಅಷ್ಟರ ಮಟ್ಟಿಗೆ ಇನ್ನೂ ಎಚ್ಚೆತ್ತಿಲ್ಲ.

    | ಡಾ. ರಾಜೇಗೌಡ , ಕೃಷಿ ಹವಾಮಾನ ತಜ್ಞ

    ತಮಿಳುನಾಡಿನಲ್ಲಿ ಪ್ರತ್ಯೇಕ ಕಂಪನಿ ಮಾಡಿರುವ ಬಗ್ಗೆ ಅಧ್ಯಯನ ಮಾಡುತ್ತೇವೆ. ಆ ನಂತರ ರಾಜ್ಯದಲ್ಲಿ ಏನು ಮಾಡಬೇಕೆಂಬ ಬಗ್ಗೆ ರ್ಚಚಿಸುತ್ತೇವೆ. ಇಲಾಖೆಗಳನ್ನು ಕ್ರಿಯಾ ಯೋಜನೆ ಜಾರಿಗೆ ಸಿದ್ಧಪಡಿಸುವ ಕಾರ್ಯ ಮಾಡುತ್ತೇವೆ.

    | ಜಗನ್​ವೋಹನ್ ಶರ್ಮ ಮಹಾ ನಿರ್ದೇಶಕರು, ಎಂಪ್ರಿ

    ಎರಡು ರೀತಿ ಕ್ರಮ ಅಗತ್ಯ: ಹವಾಮಾನ ಬದಲಾವಣೆ ಪರಿಣಾಮ ನಿಯಂತ್ರಣಕ್ಕೆ 2 ರೀತಿ ಕ್ರಮ ಕೈಗೊಳ್ಳಬೇಕು. ಮಿಟಿಗೇಷನ್ ಮತ್ತು ಅಡಾಪ್ಟೇಷನ್. ಮಿಟಿಗೇಷನ್ ಅಂದರೆ ಹವಾಮಾನದಲ್ಲಿ ಕಾರ್ಬನ್ ಡೈಆಕ್ಸೆ ೖಡ್ ಹಾಗೂ ಇತರ ಅನಿಲಗಳ ಪ್ರಮಾಣ ತಗ್ಗಿಸುವುದು. ಅಡಾಪ್ಟೇಷನ್ ಎಂದರೆ ಹೊಂದಾಣಿಕೆ. ಆದ್ದರಿಂದ ಪ್ರತ್ಯೇಕ ನೀತಿ ಹಾಗೂ ಹಣಕಾಸಿನ ಅಗತ್ಯ ದೊಡ್ಡ ಪ್ರಮಾಣದಲ್ಲಿಯೇ ಬೇಕಾಗಿದೆ.

    ಪ್ರತ್ಯೇಕ ಸಂಸ್ಥೆ ಅಗತ್ಯವೇಕೆ?: ಇಲಾಖೆಗಳ ನಡುವೆ ಹೊಂದಾಣಿಕೆ, ಕ್ರಿಯಾ ಯೋಜನೆ ಅನುಷ್ಠಾನದ ಮೇಲೆ ನಿಗಾ ಮತ್ತಿತರ ಉದ್ದೇಶಗಳಿಗೆ ಪ್ರತ್ಯೇಕ ಸಂಸ್ಥೆ ಅಗತ್ಯವಿದೆ. ಇಲ್ಲದಿದ್ದರೆ ಹವಾಮಾನ ವೈಪರೀತ್ಯ ತಡೆಯುವ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಹಿಂದಕ್ಕೆ ಹೋಗುತ್ತದೆ. ಇಲಾಖೆಗಳ ಅಧಿಕಾರಿಗಳಿಗೆ ಈ ವಿಚಾರ ಆದ್ಯತೆಯೇ ಆಗುವುದಿಲ್ಲ.

    ಐಪಿಎಸ್​ ಆಫೀಸರ್​ ಆಗಿದ್ದ ಇವರೀಗ ಸೆಕ್ಯುರಿಟಿ ಆಫೀಸರ್!: ನಿರಪರಾಧಿ ಆರ್​ಎಸ್​ಎಸ್ ಕಾರ್ಯಕರ್ತರ ಪರ ನಿಂತಿದ್ದೇ ಮುಳುವಾಯ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts