ಲವರ್​ ಜತೆ ಮಾಜಿ ಕಾರ್ಪೋರೇಟರ್​ ಪುತ್ರಿ ಎಸ್ಕೇಪ್​: ಪೊಲೀಸರ ಕೈಗೆ ಪ್ರೇಮಿಗಳಿಬ್ಬರು ಸಿಕ್ಕಿಬಿದ್ದಿದ್ದು ಹೀಗೆ

hubli Girl
Published on

ಹುಬ್ಬಳ್ಳಿ: ಪ್ರಿಯಕರನ ಜತೆ ಓಡಿಹೋಗಿದ್ದ ಹುಬ್ಬಳ್ಳಿಯ ಮಾಜಿ ಕಾರ್ಪೋರೇಟರ್ ಪುತ್ರಿಯನ್ನು ಪತ್ತೆಹಚ್ಚುವಲ್ಲಿ ಹೈರಾಣಾಗಿದ್ದ ಪೊಲೀಸರು ಕೊನೆಗೂ ಇಬ್ಬರನ್ನು ಹುಡುಕಿ ವಾಪಸ್ಸು ಕರೆತಂದಿದ್ದಾರೆ.

ಪ್ರೇಮಿಗಳಿಗಾಗಿ ಪೊಲೀಸರು ಮೂರ್ನಾಲ್ಕು ಜಿಲ್ಲೆಗಳಲ್ಲಿ ತಲಾಶ್​ ನಡೆಸಿದ್ದರು. ಕೊನೆಗೆ ಗದಗ ಜಿಲ್ಲೆಯಲ್ಲಿ ಪ್ರೇಮಿಗಳನ್ನು ಪತ್ತೆ ಹಚ್ಚಿದ್ದಾರೆ. ಮಾಜಿ ಕಾರ್ಪೋರೇಟರ್ ರಾಜಣ್ಣ ಕೊರವಿ ಅವರ ಪುತ್ರಿ ಮೊನಾಲ್, ಪ್ರಿಯಕರ ರಾಹುಲ್ ಜತೆ ಓಡಿಹೋಗಿದ್ದಳು.

ಪ್ರಭಾವಿ ರಾಜಕಾರಣಿ ಮಗಳನ್ನು ಪತ್ತೆ ಹಚ್ಚಲು ಹುಬ್ಬಳ್ಳಿ ಪೊಲೀಸರು ಹೈರಾಣಾಗಿದ್ದರು. 6 ಇನ್ಸ್​ಪೆಕ್ಟರ್​ ನೇತೃತ್ವದಲ್ಲಿ ತಂಡ ರಚಿಸಿ, ಯುವತಿ ಹಾಗು ಆಕೆಯ ಪ್ರಿಯಕರನ ಶೋಧಕ್ಕಾಗಿ ಫೀಲ್ಡಿಗೆ ಇಳಿದಿದ್ದರು. ಗದಗಿನಲ್ಲಿ ಪತ್ತೆಹಚ್ಚಿ ತಡರಾತ್ರಿ ಪ್ರೇಮಿಗಳನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಕರೆತಂದಿದ್ದಾರೆ.

ಮೋನಾಲ್ ಹಾಗು ರಾಹುಲ್ ಪರಸ್ಪರ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಮಗಳ ಪ್ರೇಮಕ್ಕೆ ಮಾಜಿ ಕಾರ್ಪೋರೇಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net