ಅದು ಹೇಗೆ ಬೇಕಾದರೂ ಆಗಬಹುದು: ತುಮಕೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ ಮಾಜಿ ಸಿಎಂ ಎಚ್​​​ಡಿಕೆ

HDK
Published on

ತುಮಕೂರು: ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಅವರು ಸ್ಫೋಟಕ ಹೇಳಿಕೆ ನೀಡಿದರು.

ತುಮಕೂರಿನ ಗಾಜಿನ ಮನೆಯಲ್ಲಿ ನಡೆದ ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಎಚ್​.ಡಿ. ಕುಮಾರಸ್ವಾಮಿ ಮಾಡತನಾಡಿದರು. ಸ್ವಾಮಿಜಿಗಳ ಆಸೆ ಈಡೇರಿಸಿಯೇ ಈಡೇರಿಸುತ್ತೇವೆ. ಪರಮ ಪೂಜ್ಯರು ಹೇಳಿದಂತೆ 2023 ರಲ್ಲಿ ನಾನೇ ಮುಖ್ಯಮಂತ್ರಿ ಆಗ್ತೀನಿ ಎಂಬ ನಂಬಿಕೆ ಇದೆ. ಅದು ಹೇಗೆ ಬೇಕಾದರೂ ಆಗಬಹುದು ಎಂದರು.

ಜೆಡಿಎಸ್​ ಮುಗಿದೆ ಹೊಯ್ತು ಅಂತಾ ಹೇಳಿಕೊಳ್ಳಲಿ. ಜನಗಳ ಆಶೀರ್ವಾದದಲ್ಲಿ ನಾನು ಸಿಎಂ ಆಗ್ತೀನಿ ಎನ್ನುವ ವಿಶ್ವಾಸ ಇದೆ. ಸ್ವಾಮಿಜಿಗಳ ಹಾಗೂ ಜನಗಳ ಆಶೀರ್ವಾದದಿಂದ 2023 ರಲ್ಲಿ ಪುನಃ ನಾನು ಸಿಎಂ ಆಗ್ತೀನಿ. ಆದರೆ, ಯಾವ ರೀತಿ ಮುಖ್ಯಮಂತ್ರಿ ಆಗ್ತಿನೋ ಗೊತ್ತಿಲ್ಲ. ಮುಖ್ಯಮಂತ್ರಿ ಆಗುವ‌ ವಿಶ್ವಾಸ ಖಂಡಿತ ಇದೆ ಎಂದರು. ಭಾಷಣದುದ್ದಕ್ಕೂ ಎರಡೆರಡು ಬಾರಿ ನಾನು ಸಿಎಂ ಆಗ್ತಿನಿ ಎಂದು ಹೇಳಿದರು. ರಾಜ್ಯದ ಬಡ ಕುಟುಂಬಗಳಿಗಾಗಿ 5 ವರ್ಷದ ಆಡಳಿತ ನೀಡುತ್ತೇನೆ ಎಂದರು.

ಕುಂಚಿಟಿಗರನ್ನು ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ‌ ಸೇರಿಸುವ‌‌ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಬೊಮ್ಮಾಯಿ ನನ್ನ ಜೊತೆ ಚೆನ್ನಾಗಿದ್ದಾರೆ. ಅವರಿಗೆ ಹೇಳಿ ಒಬಿಸಿ ಪಟ್ಟಿಗೆ‌ ಸೇರಿಸಲು ಪ್ರಯತ್ನ ಮಾಡುತ್ತೇನೆ. ನನ್ನನ್ನು ಬಿಜೆಪಿ ಬಿ ಟೀಮ್ ಎಂದರೂ ಪರವಾಗಿಲ್ಲ. ನಾನು ಬಿಜೆಪಿ ನಾಯಕರಿಗೆ ಹೇಳಿ ಕುಂಚಿಟಿಗರನ್ನು ಒಬಿಸಿಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net