ತ್ರಿವರ್ಣ ಧ್ವಜ ಹಿಡಿದು ಹರ್​ ಘರ್​ ತಿರಂಗಾ ಅಭಿಯಾನಕ್ಕೆ ಕಾಶೀ ಜಗದ್ಗುರುಗಳಿಂದ ಚಾಲನೆ

Kashi Jagadguru
Published on

ಪುಣೆ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 13 ರಿಂದ 15ರ ವರೆಗೆ ಮನೆ-ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನ ಶುರುವಾಗಿದ್ದು, ದೇಶದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಕಾಶೀ ಜಗದ್ಗುರುಗಳು ಕೂಡ ತ್ರಿವರ್ಣ ಧ್ವಜ ಹಿಡಿದು ಅಭಿಯಾನಕ್ಕೆ ಸಾಥ್​ ನೀಡಿದ್ದಾರೆ.

ಕಾಶೀ ಜಗದ್ಗುರುಗಳ ಜನ್ಮ ಅಮೃತಮಹೋತ್ಸವದ ಅಂಗವಾಗಿ ಪುಣೆ ನಗರದಲ್ಲಿ ನಡೆದ ಸಮಾರಂಭದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು.

ಈ ವಿಶೇಷ ಸಂದರ್ಭದಲ್ಲಿ ವಿವಿಧ ಮಠಾಧೀಶರು ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಅಲ್ಲದೆ, ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಿ, ದೇಶಪ್ರೇಮವನ್ನು ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net