ಸಾಮಾಜಿಕ ಜಾಲತಾಣದಲ್ಲಿ ಹರ್ ಘರ್ ತಿರಂಗಾ ಹ್ಯಾಶ್​ಟ್ಯಾಗ್ ಟ್ರೆಂಡಿಂಗ್: ಗಣ್ಯರ ಮನೆಗಳಲ್ಲಿ ಹಾರಿದ ತ್ರಿವರ್ಣ ಧ್ವಜ

Tiranga
Published on

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 13 ರಿಂದ 15ರ ವರೆಗೆ ಮನೆ-ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನ ಶುರುವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಸೇರಿದಂತೆ ಹಲವು ಗಣ್ಯರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

ಈ ಸಂಬಂಧ ಫೋಟೋಗಳನ್ನು ಆಜಾದಿ ಕಾ ಅಮೃತಮಹೋತ್ಸವ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.‌ ಬೊಮ್ಮಾಯಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿರುವ "ಮನೆ ಮನೆಯಲ್ಲೂ ತ್ರಿವರ್ಣ ಧ್ವಜ" ಅಭಿಯಾನದ ಅಂಗವಾಗಿ ಅವರ ನಿವಾಸದ ಮೇಲೆ ಕುಟುಂಬ ಸದಸ್ಯರೊಂದಿಗೆ ರಾಷ್ಟ್ರ ಧ್ವಜ ಹಾರಿಸಿದರು ಎಂದು ಬಿಜೆಪಿ ಹೇಳಿದೆ.

Koo App
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.‌ ಬೊಮ್ಮಾಯಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿರುವ "ಮನೆ ಮನೆಯಲ್ಲೂ ತ್ರಿವರ್ಣ ಧ್ವಜ" ಅಭಿಯಾನದ ಅಂಗವಾಗಿ ಅವರ ನಿವಾಸದ ಮೇಲೆ ಕುಟುಂಬ ಸದಸ್ಯರೊಂದಿಗೆ ರಾಷ್ಟ್ರ ಧ್ವಜ ಹಾರಿಸಿದರು. #HarGharTiranga #AzadiKaAmritMahotsav
View attached media content
-BJP KARNATAKA (@BJP4Karnataka)13 Aug 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net