ಕಳ್ಳತನ ಮಾಡ್ಬೇಡ ಎಂದು ಬುದ್ಧಿಮಾತು ಹೇಳಿದ್ದಕ್ಕೆ ತಂದೆಯನ್ನೇ ಕೊಲೆಗೈದ ಮಗ

Death
Published on

ಚಿತ್ರದುರ್ಗ: ಬುದ್ಧಿಮಾತು ಹೇಳಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಭರಮಸಾಗರ ಕಪ್ಲೆಯಲ್ಲಿ ನಡೆದಿದೆ.

ಗುಂಡ್ಲು ಮಲ್ಲಯ್ಯ (70) ಕೊಲೆಯಾದ ತಂದೆ. ಲೋಕೇಶ್ (28) ಆರೋಪಿ ಮಗ. ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಮಗನಿಗೆ ಅದು ತಪ್ಪು ಎಂದು ತಂದೆ ಬುದ್ಧಿಮಾತು ಹೇಳಿದ್ದರು. ನನಗೆ ಬುದ್ಧಿಮಾತು ಹೇಳ್ತಿಯ ಅಂತಾ ಮಗ ಗಲಾಟೆ ತೆಗೆದಿದ್ದ.

ಕೈಕಾಲು ಕಟ್ಟಿ ಹಾಕಿದ್ರೆ ಎಲ್ಲಿಗೂ ಹೋಗೋದಿಲ್ಲ ಅಂತಾ ಮಗನ ಕೈಕಾಲು ಕಟ್ಟಿ ಹಾಕಲು ತಂದೆ ಮುಂದಾಗಿದ್ದರು. ಕೈಕಾಲು ಕಟ್ಟುವಾಗ ತಂದೆಗೆ ಜೋರಾಗಿ ಕಾಲಿನಿಂದ ಒದ್ದ ಪರಿಣಾಮ ಕಲ್ಲಿನ ಮೇಲೆ ಬಿದ್ದು ತಂದೆ ಮೃತಪಟ್ಟಿದ್ದಾರೆ.

ಲೋಕೇಶ್ ವಿರುದ್ಧ ನಾಯಕನಹಟ್ಟಿ, ತಳಕು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಕಳ್ಳತನ ಪ್ರಕರಣ ದಾಖಲಾಗಿದ್ದವು. ಮಗನ ಕಳ್ಳತನ ವೃತ್ತಿಯಿಂದ ಪಾಲಕರು ನೊಂದಿದ್ದರು. ಘಟನಾ ಸ್ಥಳಕ್ಕೆ ಎಸ್ಪಿ ಪರಶುರಾಮ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಲೋಕೇಶ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net