ಬಕ್ರೀದ್ ಹಬ್ಬಕ್ಕೆಂದು ತಂದಿದ್ದ 18 ಒಂಟೆಗಳ ರಕ್ಷಣೆ: ಕೋರಮಂಗಲದ ಗೋಶಾಲೆಗೆ ರವಾನೆ

Camels
Published on

ಆನೇಕಲ್: ಬಕ್ರೀದ್ ಹಬ್ಬಕ್ಕಾಗಿ ಸಾಗಿಸುತ್ತಿದ್ದ ಒಂಟೆಗಳನ್ನು ರಕ್ಷಣೆ ಮಾಡಿರುವ ಘಟನೆ ಕರ್ನಾಟಕ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.

ಬಕ್ರೀದ್ ಹಬ್ಬಕ್ಕೆಂದು ರಾಜಸ್ಥಾನದಿಂದ ಅಕ್ರಮವಾಗಿ ತರಲಾಗಿದ್ದ 18 ಒಂಟೆಗಳನ್ನು ಹೊಸೂರು ಬಳಿ ರಹಸ್ಯವಾಗಿ ಕಟ್ಟಿ ಹಾಕಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊಸೂರು ನಗರಪಾಲಿಕೆ ಅಧಿಕಾರಿಗಳು ಒಂಟೆಗಳನ್ನು ರಕ್ಷಣೆ ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಒಂಟೆಗಳ ಬಲಿ ನಿಷೇಧ ಹಿನ್ನೆಲೆ ಹೊಸೂರಿನಲ್ಲಿ ಅಕ್ರಮವಾಗಿ ತಂದು ಬೆಂಗಳೂರು ಸೇರಿದಂತೆ ಹಲವು ಕಡೆ ಸಾಗಿಸಲು ಹೊಂಚು ಹಾಕಲಾಗಿತ್ತು ಎನ್ನಲಾಗಿದೆ. ಮಾಹಿತಿ ಆಧರಿಸಿ ಹೊಸೂರು ನಗರಪಾಲಿಕೆ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಒಂಟೆಗಳನ್ನು ಬಿಟ್ಟು ಅಸಾಮಿಗಳು ಪರಾರಿಯಾಗಿದ್ದಾರೆ. ಬಳಿಕ 18 ಒಂಟೆಗಳನ್ನು ಕೋರಮಂಗಲದ ಗೋಶಾಲೆಗೆ ರವಾನಿಸುವ ಮೂಲಕ ರಕ್ಷಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net