ದೊಡ್ಡಬಳ್ಳಾಪುರದಿಂದಲೇ ಜನೋತ್ಸವಕ್ಕೆ ಮತ್ತೆ ಚಾಲನೆ: ಸಿಎಂ ಬೊಮ್ಮಾಯಿ‌ ಹೇಳಿಕೆ

Bommai
Published on

ಬೆಂಗಳೂರು: ಜನರ ಉತ್ಸಾಹ, ಒತ್ತಾಸೆ, ಒತ್ತಡ, ಸಚಿವರ ಅಪೇಕ್ಷೆಗೆ ತಲೆಬಾಗಿ ದೊಡ್ಡಬಳ್ಳಾಪುರದಿಂದಲೇ ಜನೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದ್ದು, ಆ.28ರಂದು ಸಮಾವೇಶದ ಉದ್ಘಾಟನಾ ಸಮಾರಂಭ ನೆರವೇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ರಾಜ್ಯದ ನಾಲ್ಜೈದು ಸ್ಥಳಗಳಲ್ಲಿ ಸಮಾವೇಶ ನೆರವೇರಿಸಿದ ನಂತರ ದೊಡ್ಡಬಳ್ಳಾಪುರದಲ್ಲಿ ಸಮಾರೋಪ ಆಯೋಜಿಸಲು ಯೋಚಿಸಿದ್ದೆವು.

ಆದರೆ ಎಲ್ಲಿಂದ ಹೆಜ್ಜೆಯಿರಿಸಬೇಕೆಂದಿರುವಿರೋ ಅಲ್ಲಿಂದಲೇ ಆರಂಭವಾಗಲಿ. ಸರ್ಕಾರದ ಮೂರು ವರ್ಷಗಳ ಸಾಧನೆ ಬಗ್ಗೆ ಉತ್ಸವದ ಮೂಲಕ ಸಂಭ್ರಮಿಸಲು ಜನರು ತಯಾರಾಗಿದ್ದಾರೆ. ಎಲ್ಲ ಸಿದ್ಧತೆಗಳು ಮಾಡಲಿದ್ದೇವೆ ಎಂದು ಆ ಭಾಗದ ಜನರು, ಸಚಿವ ಡಾ.ಕೆ.ಸುಧಾಕರ್ ಇನ್ನಿತರರು ಮನವಿ ಮಾಡಿಕೊಂಡ ಕಾರಣ ಆ.28ರಂದು ಜನೋತ್ಸವ ಆಯೋಜನೆಗೆ ಸಮ್ಮತಿಸಲಾಗಿದೆ ಎಂದರು.

ರಾಜ್ಯದ ನಾಲ್ಕೈದು ಸ್ಥಳಗಳಲ್ಲಿ ಸಮಾವೇಶ ಏರ್ಪಡಿಸಲು ಯೋಚಿಸಿದ್ದು, ಸಮಾವೇಶದ ಸಮಾರೋಪ ಸ್ಥಳ ಇನ್ನೂ ಅಂತಿಮವಾಗಿಲ್ಲ. ಕೇಂದ್ರ ನಾಯಕರ ಜತೆ ಇವತ್ತು ಚರ್ಚಿಸಿದ ಬಳಿಕ ಯಾರೆಲ್ಲ ಭಾಗವಹಿಸಲಿದ್ದಾರೆ ಎನ್ನುವುದು ತಿಳಿಯಲಿದೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net