ಅಂಗಡಿಯ ಬಾಗಿಲು ಮುಚ್ಚದೇ ಟೀ ಕುಡಿಯಲು ಹೋಗಿದ್ದ ಮಾಲೀಕನಿಗೆ ಕಾದಿತ್ತು ಬಿಗ್​ ಶಾಕ್​!

1234623
Published on

ದಾವಣಗೆರೆ: ಇಲ್ಲೆ ಹತ್ತಿದಲ್ಲೇ ಇದೆ ಅಂತಾ ಅಂಗಡಿ ಬಾಗಿಲು ಮುಚ್ಚದೇ ಹೊರಗಡೆ ಹೋದರೆ ಏನಾಗಲಿದೆ ಎಂಬುದಕ್ಕೆ ದಾವಣಗೆರೆಯಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಲಿದೆ.

ಮಾಲೀಕ ಟೀ ಕುಡಿಯಲು ಹೋಗಿದ್ದ ಸಮಯದಲ್ಲಿ ಅಂಗಡಿಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿ, ಕ್ಯಾಶ್​ ಕೌಂಟರ್​ನಲ್ಲಿದ್ದ 10 ಸಾವಿರ ರೂಪಾಯಿ ಹಣವನ್ನು ಕದ್ದು ಕಳ್ಳ ಪರಾರಿಯಾಗಿದ್ದಾನೆ.

ಈ ಘಟನೆ ದಾವಣಗೆರೆಯ ಹದಡಿ‌ ರಸ್ತೆಯಲ್ಲಿರುವ ಕಲ್ಲೇಶ್ವರ ಟೈಲ್ಸ್ ಶಾಪ್‌ನಲ್ಲಿ ನಡೆದಿದೆ. ಹಣ ಕಳುವು ಮಾಡಿದ ದೃಶ್ಯ ಸಿಸಿ‌‌ಟಿವಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ಟೀ ಕುಡಿದು ಬಂದ ಅಂಗಡಿ ಮಾಲೀಕ ಕ್ಯಾಶ್​ ಕೌಂಟರ್​ ನೋಡಿದಾಗ ಹಣ ಇಲ್ಲದಿರುವುದನ್ನು ನೋಡಿ ಶಾಕ್​ ಆಗಿದ್ದಾರೆ.

ಇದೀಗ ಅಂಗಡಿ ಮಾಲೀಕ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net