

ಬೆಂಗಳೂರು: ಡಾಲರ್ ಎದುರು ರೂಪಾಯಿ ಐತಿಹಾಸಿಕವಾಗಿ ದಾಖಲೆ ಮಟ್ಟದಲ್ಲಿ ಕುಸಿದಿದೆ, ಮೋದಿಯವರ 8 ವರ್ಷಗಳ ಅವಧಿಯಲ್ಲಿ ರೂಪಾಯಿ ಕುಸಿತದ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ವೈಫಲ್ಯ ಮುಚ್ಚಿಕೊಳ್ಳಲು ’ಮೌನ’ ಪರಿಹಾರ, ದುರಾಡಳಿತ ಮುಚ್ಚಿಕೊಳ್ಳಲು ’ಮಾತು’ ಪರಿಹಾರ ಅಂದುಕೊಂಡಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಮಾಡಿರುವ ಎಡವಟ್ಟುಗಳು ಮತ್ತು ಅದು ನೀಡಿರುವ ಸಮರ್ಥನೆಗಳನ್ನು ಕಾಂಗ್ರೆಸ್ ಈ ಕೆಳಕಂಡಂತೆ ಪಟ್ಟಿ ಮಾಡುವ ಮೂಲಕ ವ್ಯಂಗ್ಯವಾಡಿದೆ.
◆ಕರೊನಾಗೆ - ತಟ್ಟೆ ಜಾಗಟೆ ಪರಿಹಾರ ◆ನಿರುದ್ಯೋಗಕ್ಕೆ - ಪಕೋಡಾ ಪರಿಹಾರ ◆ಬಡತನಕ್ಕೆ - ಭಾಷಣಗಳ ಪರಿಹಾರ ◆ಬೆಲೆ ಏರಿಕೆಗೆ - ಸುಳ್ಳುಗಳ ಪರಿಹಾರ ◆ವೈದ್ಯಕೀಯ ಬಿಕ್ಕಟ್ಟಿಗೆ - ಗೋಮೂತ್ರದ ಪರಿಹಾರ ◆ಆರ್ಥಿಕ ಕುಸಿತಕ್ಕೆ - ಗೋಬರ್ ಎಕಾನಮಿ ಪರಿಹಾರ! ಇವು @BJP4India ಆಡಳಿತದ ಮಾದರಿಗಳು!
ಬಿಜೆಪಿ ಸರ್ಕಾರದ ಸಮರ್ಥನೆಗಳು ◆ಹಣದುಬ್ಬರ ಇಲ್ಲವೇ ಇಲ್ಲ ◆ಡಾಲರ್ ಎದುರು ರೂಪಾಯಿ ಕುಸಿಯುತ್ತಿಲ್ಲ ◆ದೇಶದಲ್ಲಿ ಸಮಸ್ಯೆಗಳೇ ಇಲ್ಲ ◆ಬೆಲೆ ಏರಿಕೆ ವಿಷಯವೇ ಅಲ್ಲ ◆ತೆರಿಗೆ ಹೇರಿಕೆ ಸಮಸ್ಯೆಯೇ ಅಲ್ಲ
ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಮಾತಿಗೂ ಆಡಳಿತ ಪಕ್ಷದಲ್ಲಿರುವ ಬಿಜೆಪಿ ಮಾತಿಗೂ ಅದೆಷ್ಟು ವೈರುಧ್ಯ ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.