ಕಾಲೇಜ್​ಗೆ ಚಕ್ಕರ್ ಹಾಕಿ ಪಾರ್ಕಿನ ಪೊದೆ ಮರೆಯಲ್ಲಿ ವಿದ್ಯಾರ್ಥಿಗಳ ಅಸಭ್ಯ ವರ್ತನೆ: ಸಾರ್ವಜನಿಕರ ಆಕ್ರೋಶ

CKB
Published on

ಚಿಕ್ಕಬಳ್ಳಾಪುರ: ಮಕ್ಕಳನ್ನು ನಂಬಿ ಪಾಲಕರು ಕಾಲೇಜಿಗೆ ಕಳುಹಿಸಿದರೆ, ಕಾಲೇಜಿಗೆ ಚಕ್ಕರ್​ ಹೊಡೆಯುವ ಹುಡುಗ-ಹುಡುಗಿಯರು ಪೊದೆ ಮರೆಯಲ್ಲಿ ಅಸಭ್ಯ ವರ್ತನೆ ತೊಡಗುತ್ತಿರುವ ದೃಶ್ಯ ಚಿಕ್ಕಬಳ್ಳಾಪುರದ ಪಾರ್ಕ್​ವೊಂದರಲ್ಲಿ ಕಂಡುಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮನೆಯಿಂದ ಪಾಲಕರು ವಿದ್ಯಾರ್ಥಿಗಳನ್ನ ಕಾಲೇಜಿಗೆ ಕಳುಹಿಸಬೇಕಾದರೆ, ಹೆಣ್ಣು ಅಥವಾ ಗಂಡು ಮಕ್ಕಳನ್ನು ಮನೆಯಿಂದ ಆಚೆಗೆ ಕಳುಹಿಸಬೇಕಾದರೆ, ಪಾಲಕರಿಗೆ ಒಂದು ನಂಬಿಕೆ ಇರುತ್ತದೆ. ನಮ್ಮ ಮಕ್ಕಳು ಚೆನ್ನಾಗಿ ಕಲಿಯೋದಕ್ಕೆ ಹೊರಗಡೆ ಹೋಗಿದ್ದಾರೆ ಎಂಬ ನಂಬಿಕೆ ಇರುತ್ತದೆ. ಆದರೆ, ವಿದ್ಯಾರ್ಥಿಗಳು ಪಾರ್ಕಿಗೆ ಬಂದು ಪೊದೆ ಮರೆಯಲ್ಲಿ ಬೇಕಿಲ್ಲದೆ ಇರೋ ಕೆಲಸಗಳನ್ನು ಮಾಡಿಕೊಳ್ಳುತ್ತಾ, ಅವರ ಹದಿಹರೆಯದ ವಯಸ್ಸಿನ ಆಸೆಗಳನ್ನು ಈಡೇರಿಸಿಕೊಳ್ಳುತ್ತಿರುವುದು ನಿಜಕ್ಕೂ ಸರಿಯಲ್ಲ. ಹೀಗೆ ಮಾಡುವುದು ಒಂದು ಕಡೆ ಪಾಲಕರಿಗೂ ಮತ್ತು ಸಮಾಜಕ್ಕೂ ಅವರು ಮಾಡುತ್ತಿರು ವಂಚನೆ ಎಂದು ಚಿಕ್ಕಾಬಳ್ಳಾಪುರದ ಸ್ಥಳೀಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿಕ್ಕಾಬಳ್ಳಾಪುರ ನಗರಸಭೆ ಅವರು ಪಾರ್ಕಿನಲ್ಲಿ ಗಿಡಗಳನ್ನು ಚೆನ್ನಾಗಿ ಬೆಳೆಸಬೇಕಿತ್ತು. ಆದರೆ, ಪಾರ್ಥೇನಿಯಂ ಗಿಡವನ್ನು ಬೆಳೆಸುತ್ತಿದ್ದಾರೆ. ಹೆಚ್ಚಾಗಿ ಪಾರ್ಥೇನಿಯಂ ಗಿಡ ಬೆಳೆದಿದ್ದು, ಮರೆಯಾಗಿರುವುದರಿಂದ ಇದು ಅನೈತಿಕ ಚಟುವಟಿಕೆಯ ತಾಣವಾಗಿದೆ. ಹಗಲಿನಲ್ಲಿ ಯಾವಾಗ ನೋಡಿದರೂ ಎಣ್ಣೆ, ಗಾಂಜಾ ಹಾಗೂ ಧೂಮಪಾನ ಮಾಡಿ ಬಿದ್ದಿರುತ್ತಾರೆ. ಇದೆಲ್ಲವನ್ನು ಗಮನಿಸಿದ್ದೆವು. ಇಷ್ಟೆಲ್ಲ ನಡೆಯುತ್ತಿದ್ದರೂ ಸುಮ್ಮನಾಗಿದ್ದೆವು. ಈಗ ನೋಡಿದರೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಅವರನ್ನು ಇಲ್ಲಿ ಲೈಂಗಿಕವಾಗಿ ಶೋಷಣೆ ಮಾಡುವ ಚಟುವಟಿಕೆಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಕೂಡ ಉದ್ಯೋಗದ ಆಸೆಗೋ? ಅಥವಾ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಹದಿಹರೆಯದ ಹುಡುಗರ ಕಾಮದಾಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪಾಪಾ ಆ ಹುಡುಗ-ಹುಡುಗಿಯರಿನ್ನೂ ಚಿಕ್ಕ ವಯಸ್ಸಿನವರು. ಅವರಿಗೆ ಇನ್ನು ಪ್ರಪಂಚ ಏನು ಎಂಬುದು ಸರಿಯಾಗಿ ತಿಳಿದಿಲ್ಲ. ಇದನೆಲ್ಲ ನಿಯಂತ್ರಣ ಮಾಡಬೇಕಾದರೆ, ಇಲ್ಲಿರುವ ಇರುವಂತಹ ವ್ಯವಸ್ಥೆ ಸರಿಯಾಗಬೇಕು. ಉದ್ಯಾನವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಅದೊಂದೆ ಅನೈತಿಕ ಚಟುವಟಿಕೆ ತಡೆಗಟ್ಟಲು ಇರುವ ಒಂದೇ ದಾರಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net