

ಚಿಕ್ಕೋಡಿ: ಮಹಿಳೆಯನ್ನು ಬಲವಂತದ ಸಂಭೋಗಕ್ಕೆ ಕರೆದ ಆರೋಪದಡಿ ವಕೀಲನೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
ಗಂಡನ ಸಾರಾಯಿ ಚಟ ಬಿಡಿಸಬೇಕು ಅಂತಾ ಔಷಧಿ ಪಡೆಯಲು ಸಂತ್ರಸ್ತ ಮಹಿಳೆ ಬಂದಿದ್ದಳು. ಔಷಧಿಯನ್ನು ನಮ್ಮ ಪರಿಚಯಸ್ಥರೆ ಕೊಡುತ್ತಾರೆ ಎಂದು ನಂಬಿಸಿ ವಕೀಲ ಸಂಜು ವಡ್ರಗಾಂವಿ ಮಹಿಳೆಯನ್ನು ತನ್ನ ಮನೆಗೆ ಕರೆದೊಯ್ದಿದ್ದ. ಇದರ ಬೆನ್ನಲ್ಲೇ ಮಹಿಳೆ ಚೀರಾಟ ಕೇಳಿ ವಕೀಲನ ಮನೆ ಮುಂದೆ ಸ್ಥಳೀಯರು ಜಮಾಯಿಸಿದ್ದರು.
ವಕೀಲನ ಕೃತ್ಯ ಬಯಲಾದ ಬೆನ್ನಲ್ಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ವಕೀಲನಿಂದ ಮಹಿಳೆಯನ್ನು ರಕ್ಷಿಸಿರುವ ಪೊಲೀಸರು, ಪ್ರಕರಣ ದಾಖಲಿಸಿ ಆರೋಪಿ ವಕೀಲನನ್ನು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್)