

ಮೈಸೂರು: ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪತಿ ಮತ್ತು ಮಾವನ ವಿರುದ್ಧ ದೂರು ನೀಡಿದ ಬೆನ್ನಲ್ಲೇ ನಟಿ ಚೈತ್ರಾ ಹಳ್ಳಿಕೇರಿ ನಿನ್ನೆ (ಮೇ.24) ಸುದ್ದಿಗೋಷ್ಠಿ ನಡೆಸಿ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ತಮ್ಮ ಲಾಯರ್ ಜೊತೆ ಆಗಮಿಸಿ ಚೈತ್ರಾ ಪತ್ರಿಕಾಗೋಷ್ಠಿ ನಡೆಸಿದರು. ಮೈಸೂರಿನ ಜಯಲಕ್ಷ್ಮಿ ಪುರಂನಲ್ಲಿರೋ ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ನನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಅದರಲ್ಲಿ ಲೋನ್ ವ್ಯವಹಾರ ಎಲ್ಲವೂ ನಡೆದಿದೆ. ಬ್ಯಾಂಕ್ ಖಾತೆಯನ್ನು ನನ್ನ ಗಂಡ ಮತ್ತು ಅವರ ತಂದೆ ಓಪನ್ ಮಾಡಿದ್ದರು. ಆದರೆ, ಕೆವೈಸಿ ನನ್ನ ನಂಬರ್ನಲ್ಲಿ ಇರಲಿಲ್ಲ. ಬ್ಯಾಂಕ್ ಖಾತೆ ಇರೋದು ನಂಗೆ ಗೊತ್ತಿತ್ತು. ಆದರೆ, ಲೋನ್ ಬಗ್ಗೆ ಗೊತ್ತಿರಲಿಲ್ಲ. ಸ್ಟೇಟ್ಮೆಂಟ್ ತೆಗೆದುಕೊಳ್ಳುವುದಕ್ಕೆ ಹೋದಾಗಲೇ ಲೋನ್ ಬಗ್ಗೆ ನನಗೆ ಗೊತ್ತಾಗಿದ್ದು ಎಂದರು.
ನನ್ನ ಮದುವೆ ಸಮಯದಿಂದ ಹಿಡಿದು ಇಲ್ಲಿಯವರೆಗೆ ಎಲ್ಲಾ ಗೋಲ್ಡ್ ಕೂಡ ಅವರ ಮನೆಯಲ್ಲೇ ಇದೆ. ಅವರು ಕೆವೈಸಿ ನಂಬರ್ ಬದಲಾಯಿಸಿದ್ದಾರೆ. 2006ರಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಆಗಿದೆ. ಕೆವೈಸಿ ಬದಲಾಯಿಸೋವಾಗ ಬ್ಯಾಂಕ್ ಸಿಬ್ಬಂದಿಯ ಕೈವಾಡವು ನಡೆದಿದೆ. ಈಗ ತನಿಖೆ ನಡೆಯುತ್ತಿದೆ. ಬ್ಯಾಂಕ್ ವ್ಯವಹಾರಗಳು ಆಗಿರುವುದರಿಂದ ಹೆಚ್ಚಿನ ಮಾಹಿತಿ ಕೊಡುವುದಕ್ಕೆ ಆಗಲ್ಲ. ತನಿಖೆಯಿಂದ ಎಲ್ಲವು ಬೆಳಕಿಗೆ ಬರುತ್ತದೆ ಎಂದು ತಿಳಿಸಿದರು.
2018ರಲ್ಲಿ ನನ್ನ ಮೇಲೆ ಹಲ್ಲೆ ಮಾಡಿದಾಗ ರಾಜಿ ಮಾಡಿಕೊಂಡೆವು. ಆಗ ಬಂದು ಕ್ಷಮೆ ಕೇಳಿದರು. ಇನ್ಮುಂದೆ ನಿನ್ನ ಮೇಲೆ ಕೈ ಮಾಡುವುದಿಲ್ಲ ಅಂದರು. ಇನ್ಮುಂದೆ ಚೆನ್ನಾಗಿ ಸಂಸಾರ ಮಾಡೋಣ ಅಂದಿದ್ದರು. ಈಗ ನೋಡಿದರೆ, ಕಂಪನಿಯಿಂದಲೂ ನನ್ನ ಹೆಸರನ್ನು ಕಿತ್ತು ಹಾಕಿದ್ದಾರೆ. ಮನೆ ಕೆಲಸದವರನ್ನು ಡೈರೆಕ್ಟರ್ ಮಾಡಿದ್ದಾರೆ. ನನ್ನ ಹಣವನ್ನುಇ ದುರ್ಬಳಕೆ ಯಾಕೆ ಮಾಡಿಕೊಂರು ಅಂತ ಅವರನ್ನೇ ಕೇಳಿ ಎಂದರು ಹೇಳಿದರು.
ನನ್ನ ಮೇಲೆ ದೈಹಿಕವಾಗಿ ಹಲ್ಲೆಯಾಗಿದೆ. ನಮ್ಮದು ಲವ್ ಕಮ್ ಅರೆಂಜ್ ಮ್ಯಾರೆಜ್. ಇಷ್ಟೂ ದಿನ ಸಂಸಾರ ಸರಿ ಮಾಡಿಕೊಳ್ಳೋಣ ಅಂತ ನೊಡ್ತಾಯಿದ್ದೆ, ಈಗ ಸಂಸಾರ ಉಳಿಸಿಕೊಳ್ಳೊಕೆ ಆಗುವುದಿಲ್ಲ ಎನ್ನುವ ಮೂಲಕ ಗಂಡನಿಂದ ದೂರಾಗುವ ಮಾತನ್ನು ಆಡಿದರು. (ದಿಗ್ವಿಜಯ ನ್ಯೂಸ್)