ವಿದ್ಯುತ್ ಸೋರಿಕೆ ತಡೆಗಟ್ಟಲು ಬೆಸ್ಕಾಂನಿಂದ ಉಚಿತ ಡಿಜಿಟಲ್ ಮೀಟರ್ ಅಳವಡಿಕೆ

BESCOM
Published on

ಬೆಂಗಳೂರು: ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಬೆಸ್ಕಾ) ವಿದ್ಯುತ್ ಸೋರಿಕೆ ತಡೆಗಟ್ಟಲು ಪ್ರಮುಖ ಹೆಜ್ಜೆಯೊಂದನ್ನು ಇರಿಸಿದೆ.

ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ ಪ್ರದೇಶದಲ್ಲಿ ಗ್ರಾಹಕರ ಮನೆಗಳಲ್ಲಿ ಇರುವಂತಹ ಹಳೆಯ ಮೀಟರ್‌ಗಳನ್ನು ಬದಲಾಯಿಸಿ, ಹೊಸ ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿದೆ.

ಗ್ರಾಹಕರೇ, ನಿಮ್ಮ ಮನೆಯ ಹಳೆಯ ಮೆಕ್ಯಾನಿಕಲ್ ಮೀಟರ್'ಗಳನ್ನು ಬೆಸ್ಕಾಂ ಉಚಿತವಾಗಿ ನೂತನ ಡಿಜಿಟಲ್ ಮೀಟರ್'ಗಳಿಗೆ ಬದಲಾಯಿಸುತ್ತಿದೆ ಎಂದು 'ನಮ್ಮ ಬೆಸ್ಕಾಂ' ಕೂ ಮಾಡಿದೆ.

ಮೀಟರ್ ಬದಲಾವಣೆಗೆ ಗ್ರಾಹಕರು ಯಾವುದೇ ರೀತಿಯ ಹಣವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ ಎಂದೂ ಸಹ ಬೆಸ್ಕಾಂ ಸ್ಪಷ್ಟಪಡಿಸಿದೆ.

Koo App
ಗ್ರಾಹಕರೇ, ನಿಮ್ಮ ಮನೆಯ ಹಳೆಯ ಮೆಕ್ಯಾನಿಕಲ್ ಮೀಟರ್’ಗಳನ್ನು ಬೆಸ್ಕಾಂ ಉಚಿತವಾಗಿ ನೂತನ ಡಿಜಿಟಲ್ ಮೀಟರ್’ಗಳಿಗೆ ಬದಲಾಯಿಸುತ್ತಿದೆ. ವಿ.ಸೂ: ಮೀಟರ್ ಬದಲಾವಣೆಗೆ ಗ್ರಾಹಕರು ಯಾವುದೇ ರೀತಿಯ ಹಣವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ. @mdbescom @V_Sunil_Kumar @bsbommai
View attached media content
-Namma BESCOM (@nammabescom)19 July 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net