More

    ಪಾರ್ವತಿಯಾಗಿ ದೀಪಿಕಾ?; ಬ್ರಹ್ಮಾಸ್ತ್ರ-2 ಚಿತ್ರದಲ್ಲಿ ನಟಿಸುವ ಸಾಧ್ಯತೆ

    ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಮತ್ತೆ ಜತೆಯಾಗಿ ನಟಿಸುವ ಸಾಧ್ಯತೆ ಕಂಡು ಬರುತ್ತಿದೆ. ‘ಬಚ್​ನಾ ಯೇ ಹಸೀನೋ’, ‘ಯೇ ಜವಾನಿ ಹೈ ದಿವಾನಿ’ ಹಾಗೂ ‘ತಮಾಷಾ’ ಚಿತ್ರಗಳ ಬಳಿಕ ನಾಲ್ಕನೇ ಬಾರಿಗೆ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ 1 – ಶಿವ’ ಇದೇ ಸೆ.9ರಂದು ರಿಲೀಸ್ ಆಗಲಿದೆ. ಕ್ಲೈಮ್ಯಾಕ್ಸ್ ನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದು, ಎರಡನೇ ಭಾಗದಲ್ಲಿ ನಾಯಕಿಯಾಗಿ ಮುಂದುವರಿ ಯಲಿದ್ದಾರೆ ಎನ್ನಲಾಗಿದೆ. ಅದು ‘ಬ್ರಹ್ಮಾಸ್ತ್ರ’ ಯಶಸ್ಸನ್ನು ಅವಲಂಬಿಸಿದೆ. ರಣಬೀರ್ ಕಪೂರ್, ಆಲಿಯಾ ಭಟ್ ಜೋಡಿಯಾಗಿರುವ ಈ ಚಿತ್ರ, ನಿರೀಕ್ಷಿಸಿದಂತೆಯೇ ಹಿಟ್ ಆದರೆ, ಎರಡು ಹಾಗೂ ಮೂರನೇ ಭಾಗಗಳೂ ಬರಲಿವೆಯಂತೆ. ಆ ನಿಟ್ಟಿನಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ ಮುಂದುವರೆದ ಭಾಗಗಳ ನೀಲಿ ನಕ್ಷೆಯನ್ನೂ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಕನ್ನಡ ‘ಕೇಸರಿಯಾ’ ಹಾಡಿಗೆ ಮೆಚ್ಚುಗೆ!: ಇತ್ತೀಚೆಗಷ್ಟೇ ‘ಬ್ರಹ್ಮಾಸ್ತ್ರ’ ಚಿತ್ರದ ‘ಕೇಸರಿಯಾ …’ ಹಾಡು ರಿಲೀಸ್ ಆಗಿದೆ. ಐದು ಭಾಷೆಗಳಲ್ಲೂ ಏಕಕಾಲಕ್ಕೆ ಚಿತ್ರತಂಡ ರಿಲೀಸ್ ಮಾಡಿದೆ. ಹಿಂದಿ ವರ್ಷನ್​ಗೆ ಅರಿಜಿತ್ ಸಿಂಗ್ ಕಂಠದಾನ ಮಾಡಿದ್ದಾರೆ. ಆದರೆ, ಹಿಂದಿ ಸಾಹಿತ್ಯದಲ್ಲಿ ‘ಕೇಸರಿಯಾ’ಗೆ ಪ್ರಾಸವಾಗಿ ‘ಲವ್​ಸ್ಟೋರಿಯಾ’ ಎಂದು ಬಳಸಿಕೊಳ್ಳಲಾಗಿದ್ದು ಸಾಕಷ್ಟು ಟ್ರೋಲ್ ಆಗುತ್ತಿದೆ. ಮತ್ತೊಂದೆಡೆ ಇದೇ ಹಾಡಿನ ಕನ್ನಡ ಸಾಹಿತ್ಯವನ್ನು ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದು, ಸಂಜಿತ್ ಹೆಗ್ಡೆ ಹಾಗೂ ಸಿಡ್ ಶ್ರೀರಾಮ್ ಹಾಡಿದ್ದಾರೆ. ಈ ಹಾಡಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನಿಮ್ಮೂರಿಗಿನ್ನು ಇವರೇ ಇನ್​ಸ್ಪೆಕ್ಟರ್; ಇಲ್ಲಿದೆ ಪೂರ್ತಿ ಮಾಹಿತಿ: 12 ಡಿವೈಎಸ್‌ಪಿ, 92 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

    ನೂಪುರ್ ಶರ್ಮಾ ಹತ್ಯೆಗಾಗಿ ಗಡಿ ದಾಟಿ ಬಂದ ಪಾಕಿಸ್ತಾನಿ; 11 ಇಂಚಿನ ಚಾಕು ಸಹಿತ ಸಿಕ್ಕಿಬಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts