'ಸಿದ್ದರಾಮಯ್ಯನವರೇ ಪಕ್ಕದ ಮನೆಯ ಧರ್ಮಪತ್ನಿಗೆ ಪತ್ರ ಬರೆಯುತ್ತೀರಾ? ಇದು ಅಪರಾಧ ಅಲ್ವಾ?'

Siddaramaiya
Published on

ಬೆಂಗಳೂರು: ರಾಜ್ಯಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವಿನ ಪೈಪೋಟಿ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಇದರ ನಡುವೆ ಜೆಡಿಎಸ್​ ನಾಯಕ ಸಿಎಂ ಇಬ್ರಾಹಿಂ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಬೇರೆಯವರು ತಾಳಿ ಕಟ್ಟುವವರಿಗೆ ಲವ್ ಲೆಟರ್ ಬರೆದ್ರೇ ಆಗುತ್ತಾ‌? ಪಕ್ಕದ ಮನೆಯ ಧರ್ಮಪತ್ನಿಗೆ ಪತ್ರ ಬರೆಯುತ್ತೀರಾ? ಇದು ಅಪರಾಧ ಅಲ್ವಾ? ಇದು ನೈತಿಕತೆಯಾ? ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದಲ್ಲಿ ಹೊಸ ಇತಿಹಾಸ ಶುರುವಾಗುತ್ತದೆ. ಬಿಜೆಪಿನಾ ಸೋಲಿಸಲೇಬೇಕು ಅಂತಿದ್ರೆ ಮೊದಲ ಪ್ರಾಶಸ್ತ್ಯ ಮತ ನಿಮಗೆ ಹಾಕೊಂಡು ಎರಡನೇ ಪ್ರಾಶಸ್ತ್ಯ ಮತ ನಮಗೆ ಕೊಡಿ. ಆದರೆ, ಅದನ್ನು ಕೊಡೋಕೆ ನೀವು ತಯಾರಿಲ್ಲ. ಎರಡನೇ ಮತ ಕೊಡುವುದಕ್ಕೆ ನಾವು ತಯಾರಿದ್ದೇವೆ ಎಂದು ಇಬ್ರಾಹಿಂ ಹೇಳಿದರು.

ಹಿಂದಿನ ಚರಿತ್ರೆ ಇದೆ ನಂಗೆ ಗೊತ್ತಿದೆ. ನಮ್ಮನ್ನು ಪೀಡಿಸಬೇಡಿ ನಮ್ಮ ಪಾಡಿಗೆ ನಮ್ಮನ್ನು ಬಿಡಿ. ನಾವು ಬಿಚ್ಚೋಕೆ ಶುರುಮಾಡಿದ್ರೇ ನಿಮಗೆ ಓಡಾಡೋಕೆ ಕಷ್ಟ ಆಗುತ್ತದೆ ಎಂದು ಸಿದ್ದರಾಮಯ್ಯಗೆ ಸಿಎಂ ಇಬ್ರಾಹಿಂ ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net