ಬೆಂಗಳೂರಲ್ಲಿ ಗಂಡನ ಕೊಂದು ಮಂಡ್ಯದಲ್ಲಿ ಸಿಕ್ಕಿಬಿದ್ದ ಪತ್ನಿ: ಪೊಲೀಸ್​ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

Mandya Police
ಕೊಲೆಯಾದ ಮಹೇಶ್​ ಮತ್ತು ಆರೋಪಿ ಶಿಲ್ಪಾ
Published on

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿ, ನಾಟಕವಾಡಿದ್ದ ಖತರ್ನಾಕ್​ ಪತ್ನಿಯನ್ನು ಬೆಂಗಳೂರು ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ.

ಮಹೇಶ್ ಕೊಲೆಯಾದ ದುರ್ದೈವಿ. ಪತ್ನಿ ಶಿಲ್ಪ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ. ಮಂಡ್ಯ ಮೂಲದ ಮಹೇಶ್, ಬೆಂಗಳೂರಿನ ಶಿಲ್ಪಾಳನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ. ಮದುವೆಯಾದ ಬಳಿಕ ಇಬ್ಬರು ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು.

ಕಳೆದ ಗುರುವಾರ ಮಹೇಶ್​ನನ್ನ ಶಿಲ್ಪಾ ಹಾಗೂ ಪ್ರಿಯಕರ ಇಬ್ಬರು ಸೇರಿ ಕೊಲೆ ಮಾಡಿ, ನಂತರ ಪಿಡ್ಸ್ ಬಂದು ಮೃತಪಟ್ಟಿದ್ದಾನೆಂದು ನಾಟಕವಾಡಿ, ಮೃತದೇಹವನ್ನು ಶಿಲ್ಪಾ ಮಹೇಶ್​ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಈ ವೇಳೆ ಅನುಮಾನಗೊಂಡ ಮಹೇಶ್​ ಪಾಲಕರು ಮೃತದೇಹವನ್ನು ಪರೀಕ್ಷಿಸಿದ್ದರು.

ಮೃತದೇಹದ ಮೇಲೆ ಗಾಯಗಳು ಪತ್ತೆಯಾದ ಬಳಿಕ ಮಂಡ್ಯ ಪೊಲೀಸರಿಗೆ ಪಾಲಕರು ಮಾಹಿತಿ ನೀಡಿದರು. ಬಳಿಕ ಶಿಲ್ಪಾಳನ್ನು ವಶಕ್ಕೆ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಪ್ರಕರಣವನ್ನು ಕೋಣನಕುಂಟೆ ಠಾಣೆಗೆ ಮಂಡ್ಯ ಪೊಲೀಸರು ವರ್ಗಾಯಿಸಿದ್ದರು. ಇದೀಗ ಕೋಣನಕುಂಟೆ ಪೊಲೀಸರು ಶಿಲ್ಪಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net