More

    ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘದ ಅಧ್ಯಕ್ಷನ ಪತ್ನಿ: ಮಾಗಡಿಯಲ್ಲಿ ಘೋರ ದುರಂತ

    ಮಾಗಡಿ: ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೊಸ ಪಾಳ್ಯದಲ್ಲಿ ನಡೆದಿದೆ.

    ತಾಲೂಕು ರೈತ ಸಂಘದ ಅಧ್ಯಕ್ಷ ಹೊಸ ಪಾಳ್ಯ ಗ್ರಾಮದ ಲೋಕೇಶ್​ ಅವರ ಪತ್ನಿ ರೂಪಾ (38) ಇವರ ಮಕ್ಕಳಾದ 6 ವರ್ಷದ ಹರ್ಷಿತ ಮತ್ತು 4 ವರ್ಷದ ಸ್ಪೂರ್ತಿ ಆತ್ಮಹತ್ಯೆ ಶರಣಾದವರು.  ಜಮೀನಿನ ಬಳಿ ಮೊದಲಿಗೆ ರೂಪ ತಮ್ಮ ಮಕ್ಕಳಿಬ್ಬರಿಗೆ ವಿಷ ಕುಡಿಸಿ ನಂತರ ತಾವೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಲೋಕೇಶ್​ ಅವರಾಗಲಿ, ಸ್ಥಳೀಯರಾಗಲಿ ಬಾಯಿ ಬಿಡುತ್ತಿಲ್ಲ. ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts