ಭಾರತದ ಸ್ಟಾರ್ಟಪ್ ವಿಭಾಗದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ಬೆಂಗಳೂರು

Startup
Published on

ಬೆಂಗಳೂರು: ಸ್ಟಾರ್ಟಪ್ ನೀತಿಯನ್ನು ಹೊಂದಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಬೆಂಗಳೂರು ಸ್ಟಾರ್ಟಪ್ ಹಬ್ ಆಗಿ ಬೆಳೆಯುವ ಮೂಲಕ ಮುಂಚೂಣಿಯಲ್ಲಿದೆ.

ಅತಿಹೆಚ್ಚು ಹಣದ ಒಳಹರಿವಿನಿಂದ ಬೆಂಗಳೂರು ದೇಶದಲ್ಲಿಯೇ ಮೊದಲ ಸ್ಥಾನ ಗಳಿಸಿದೆ. ಅನುಕ್ರಮವಾಗಿ ನವದೆಹಲಿ, ಮುಂಬೈ ಚೆನ್ನೈ ಮತ್ತು ಪುಣೆ ಐದು ಸ್ಥಾನಗಳನ್ನು ಪಡೆದುಕೊಂಡಿದೆ.

ಈ ವಿಚಾರವನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಂಚಿಕೊಂಡಿದ್ದು, ಸ್ಟಾರ್ಟಪ್ ನೀತಿಯನ್ನು ಹೊಂದಿರುವ ದೇಶದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಮತ್ತು ಇದರ ಪರಿಣಾಮವಾಗಿ ನಮ್ಮ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಮಹತ್ತರವಾಗಿ ಬೆಳೆದಿದೆ. ನಮ್ಮ ಉದಯೋನ್ಮುಖ ಆರಂಭಿಕ ಸಂಸ್ಕೃತಿಯನ್ನು ಮತ್ತಷ್ಟು ಬೆಂಬಲಿಸಲು ಹೂಡಿಕೆ ಸ್ನೇಹಿ ವಾತಾವರಣವನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

Koo App
Karnataka was one of the first states in the country to have a startup policy and as a result our startup ecosystem has grown tremendously. Our government is committed to provide a investment friendly atmosphere to further support our budding startup culture. @BJP4Karnataka @bsbommai @drashwathnarayan
View attached media content
-Dr. Murugesh R Nirani (@murugesh_nirani)23 Aug 2022

ಬೆಂಗಳೂರು ಶೀಘ್ರದಲ್ಲೇ ಯುನಿಕಾರ್ನ್ ನ ಪ್ರತಿಮೆಯನ್ನು ಹೊಂದಲಿದೆ! StartupUru ಬೆಂಗಳೂರಿಗೆ ಮತ್ತೊಂದು ಸೂಕ್ತ ಗೌರವ! ಎಂದು ಬ್ರಾಂಡ್ ಸ್ಟಾಂಟರ್ಜಿ ತಜ್ಞರಾದ ಹರೀಶ್ ಬಿಜೂರ್ ಎಂದು ಹೇಳಿದ್ದಾರೆ.

Koo App
iKOO:Nice! Bengaluru will have the statue(hopefully not a logo) of a Unicorn soon! A tastefully done one! A fitting tribute to #StartupUru Bengaluru! #Bengaluru #UnicornUru #UnicornCity #Unicorn #Startups #StartupCapital #Ekashringa #EkashringaUru #Unicorn
View attached media content
-Harish Bijoor (@harishbijoor)23 Aug 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net