ಮೂರು ಹತ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಸಿಎಂ ಬೊಮ್ಮಾಯಿ‌ ಹೇಳಿಕೆ

bommai
Published on

ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಮೂರು ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲ ನಾಗರಿಕರ ಜೀವನ, ಜೀವ‌ ಸಮಾನ. ಎಲ್ಲರ ರಕ್ಷಣೆಗೆ‌‌ ಬದ್ಧವಾಗಿದೆ. ಮೂರು ಘಟನೆಗಳನ್ನು ಸಮಾನವಾಗಿ ಪರಿಗಣಿಸಿದ್ದು, ತನಿಖೆ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿರುವೆ‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಮನೆಗೆ ಗುರುವಾರ ಭೇಟಿಯಿತ್ತು, ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಮಂಗಳೂರಿಗೆ ಹಿಂತಿರುಗಿ ವಿಮಾನ ಹಾಗೂ ಹತ್ತುವಾಗ ಸುರತ್ಕಲ್ ನಲ್ಲಿ ಫಾಜಿಲ್ ಎಂಬ ವ್ಯಕ್ತಿಯ ಕೊಲೆ ಮಾಹಿತಿ ಲಭಿಸಿತು.

ತಕ್ಷಣವೇ ಎಡಿಜಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರಿಗೆ ಸ್ಥಳದಲ್ಲಿ ಇರಲು ಸೂಚಿಸಿ, ಪರಿಸ್ಥಿತಿ ನಿಯಂತ್ರಣದ ಮೇಲೆ ನಿಗಾವಹಿಸುವ ಜತೆಗೆ ದುಷ್ಕರ್ಮಿಗಳ ಪತ್ತೆ, ಘಟನೆಗೆ ಕಾರಣ ಪತ್ತೆ ಹಚ್ಚಲು ತಿಳಿಸಿರುವೆ.

ಮಾಡೆಲ್ ವಿವರಣೆ ನೀಡಲ್ಲ

ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮಗಳ ನಿಟ್ಟಿನಲ್ಲಿ ಉತ್ತರ ಪ್ರದೇಶ‌ ಸಿಎಂ ಯೋಗಿ ಮಾಡೆಲ್ ಬಗ್ಗೆ ವಿವರಣೆ ನೀಡಲ್ಲ. ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವೆ. ಅದು ಯೋಗಿ ಮಾಡೆಲ್ ಅಥವಾ ಕರ್ನಾಟಕ ಮಾಡೆಲ್ ಆಗಿರಬಹುದು ಎಂದು ಸಿಎಂ ಬೊಮ್ಮಾಯಿ‌ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net