ಚಿಕನ್ ಅಂಗಡಿ ತೆರೆದಿದ್ದೇ ಪ್ರಾಣಕ್ಕೆ ಮುಳುವು? ಪ್ರವೀಣ್​ಗೆ ಮೊದಲೇ ಸಿಕ್ಕಿತ್ತಾ ಸಾವಿನ ಸುಳಿವು? ಸಹೋದರ ನೀಡಿದರು ಸ್ಫೋಟಕ ಹೇಳಿಕೆ

praveen
Published on

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್​ ನೆಟ್ಟಾರ್​ಗೆ ಮೊದಲೇ ಸಾವಿನ ಸುಳಿವು ಸಿಕ್ಕಿತ್ತಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದಕ್ಕೆ ಕಾರಣ, ಪ್ರವೀಣ್​ ಸಹೋದರ ರಂಜಿತ್​ ನೀಡಿರುವ ಸ್ಫೋಟಕ ಮಾಹಿತಿ.

ಕಳೆದ ಹಲವು ದಿನಗಳಿಂದ ಪ್ರವೀಣ್​ಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ 'ದಿಗ್ವಿಜಯ ನ್ಯೂಸ್'ಗೆ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕೂಡಲೇ ಕರೆಗಳು ಬರುತ್ತಿದ್ದವು. ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ತಿಳಿಸಲಾಗಿತ್ತು ಎಂದಿದ್ದಾರೆ.

ಬೆಳ್ಳಾರೆಯಲ್ಲಿ ದೊಡ್ಡ ಮಟ್ಟದಲ್ಲಿ ಚಿಕನ್, ಮಟನ್ ದಂಧೆ ನಡೆಯುತ್ತಿದೆ. ಚಿಕನ್, ಮಟನ್​, ಮೀನು ಮಾರಾಟ ಮಾಡುವ ದಂಧೆ ಮುಸ್ಲಿಮರ ಹಿಡಿತದಲ್ಲಿದೆ. ಹಲವು ದಿನಗಳ ಹಿಂದೆ ಹಿಂದೂಗಳೂ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದರಿಂದಲೇ ಈ ಗಲಾಟೆ ಶುರುವಾಗಿರುವ ಸಂದೇಹವಿದೆ.

ಈ ಕುರಿತು ಮಾಹಿತಿ ನೀಡಿರುವ ರಂಜಿತ್​, ಒಂಬತ್ತು ತಿಂಗಳ ಹಿಂದೆಯಷ್ಟೇ ಪ್ರವೀಣ್​ ಚಿಕನ್ ಅಂಗಡಿ ತೆರೆದಿದ್ದರು. ಇದೇ ಕೊಲೆಗೆ ಕಾರಣ ಇರಬಹುದು. ಇದರ ಹಿಂದೆ ಬಹು ದೊಡ್ಡ ಜಾಲವೇ ಇದೆ. ಝಾಕೀರ್ ಮತ್ತು ಷಫೀಕ್ ಪ್ರಮುಖ ಆರೋಪಿಗಳಲ್ಲ. ಇವರ ಹಿಂದೆ ಇರುವುದು ದೊಡ್ಡ ಜಾಲವಿದೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net