ನೀರಿಗಾಗಿ ಡಿಸಿ, ಶಾಸಕರಿಗೆ ಮಹಿಳೆಯರ ಘೇರಾವ್: ಗ್ರಾಮ ವಾಸ್ತವ್ಯದಲ್ಲಿ ಸಮಸ್ಯೆಗಳ ಸುರಿಮಳೆ

MLA Yadwad
Published on

ಬೆಳಗಾವಿ: ಕುಡಿಯುವ ನೀರಿಗಾಗಿ ನಿತ್ಯ ಕೈಯಲ್ಲಿ ಖಾಲಿ ಕೊಡ ಹಿಡಿದುಕೊಂಡು ಅಲೆದಾಡುತ್ತಿದ್ದೇವೆ. ನಮಗೆಲ್ಲಾ ವಯಸ್ಸಾಗಿದ್ದು ನೀರಿ ತರಲು ಸಾಧ್ಯವಾಗುತ್ತಿಲ್ಲ. ಕೈ‌ಮುಗಿಯುತ್ತೇವೆ ಕುಡಿಯಲು ನೀರು ಕೊಡಿ...

ಇದು ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಆರಂಭದಲ್ಲಿಯೇ ಕುಡಿಯುವ ನೀರಿಗಾಗಿ ಗ್ರಾಮ ಮಹಿಳೆಯರು ಶಾಸಕ ಮಹಾದೇವಪ್ಪ ಯಾದವಾಡ, ಡಿಸಿ ಎಂ.ಜಿ.ಹಿರೇಮಠ ಅವರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು.

ಊರಿನಿಂದ 1ಕಿಮೀ ದೂರದಲ್ಲಿರುವ ಕುಡಿಯುವ ನೀರಿನ ಟ್ಯಾಂಕರ್ ಇದೆ. ನೀರು ಬೇಕಾದರೆ ಅಲ್ಲಿಯವರೆಗೆ ನಡೆದುಕೊಂಡು ಹೋಗಿ ತರಬೇಕು. ಇಲ್ಲದಿದ್ದರೆ ಪಕ್ಕದಲ್ಲಿರುವ ಕೃಷಿ ಜಮೀನುಗಳಿಗೆ ಹೋಗಿ ನೀರು ತರಬೇಕು. ಎಲ್ಲ ಊರುಗಳಲ್ಲಿ ಮನೆ ಮನೆಗೆ ನೀರು ಬರುತ್ತದೆ. ಆದರೆ, ನಮ್ಮಲ್ಲಿ ಹಲವು ವರ್ಷಗಳಿಂದ ಕುಡಿಯಲು ನೀರಿಲ್ಲ.

ಶೌಚಾಲಯ ಕ್ಕೆ ಹೋಗಲು ನೀರು ಇಲ್ಲ. ನೀರು ಇರುವ ಕಡೆ ಬಯಲು ಪ್ರದೇಶ ಕ್ಕೆ ಶೌಚಕ್ಕೆ ಹೋಗುತ್ತಿದ್ದೇವೆ. ಗ್ರಾಪಂ, ತಾಪಂ, ಕಂದಾಯ ಇಲಾಖೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ಕೈ‌ ಮುಗಿಯುತ್ತಾ ಅಳಲು ತೋಡಿಕೊಂಡರು.

ಶಾಸಕರ ಅಸಾಯಕತೆ

ಇದಕ್ಕೆ ಸ್ಪಂದಿಸಿದ ಶಾಸಕ‌ ಮಹಾದೇವಪ್ಪ ಯಾದವಾಡ, ಈಗಾಗಲೇ ಜಲಜೀವ ಮಿಷನ್ ಯೊಜನೆ ಕಾಮಗಾರಿ ಆರಭವಾಗಿದೆ.‌ಸ್ಬಲ್ಪ ದಿನ ಸಮಯ ನೀಡಿದರೆ ಸಮಸ್ಯೆ ಪರಿಹರಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net