

ಬಾಗಲಕೋಟೆ: ಹಾವು ಹಿಡಿಯಲು ಹೋಗಿದ್ದಾಗ ಹಾವು ಕಚ್ಚಿ ಸ್ನೇಕ್ ಕ್ಯಾಚರ್ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸದಾಶಿವ ಕರಣಿ(30) ಮೃತ ಸ್ನೇಕ್ ಕ್ಯಾಚರ್. ಬುಧವಾರ ಸಂಜೆ ಹೊಲದಲ್ಲಿ ಹಾವು ಹಿಡಿಯುತ್ತಿದ್ದ ವೇಳೆ ನಾಗರಹಾವು ಕಚ್ಚಿದೆ. ಇದಾದ ಬಳಿಕ ಸದಾಶಿವ, ಮನೆಯಲ್ಲಿ ತಾನೇ ತಯಾರಿಸಿದ ಗಿಡಮೂಲಿಕೆ ಔಷಧಿ ಪಡೆದಿದ್ದ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹಾವುಗಳನ್ನು ಹಿಡಿಯೋದನ್ನೇ ಸದಾಶಿವ ಹವ್ಯಾಸ ಮಾಡಿಕೊಂಡಿದ್ದರು. ತಂದೆ, ಮಗ ಇಬ್ಬರು ಸಹ ಹಾವು ಹಿಡಿಯುತ್ತಿದ್ದರು. ಹಾವು ಹಿಡಿವಾಗ ಅನೇಕ ಸಲ ಕಚ್ಚಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೀಗ ಮಗ ಹಾವಿನಿಂದಲೇ ಮೃತಪಟ್ಟಿದ್ದಾರೆ. ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್)