

ಬೆಳ್ತಂಗಡಿ: ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯ(ಬಿ.ಎಡ್) ಮತ್ತು ಎಸ್.ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ(ಡಿ.ಎಡ್) ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ, ಬೆಳ್ತಂಗಡಿ ತಾಲೂಕು ವೇದಿಕೆಯಿಂದ ಕ್ವಿಜ್ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ಉದ್ಘಾಟಿಸಿದರು. ಪತ್ರಕರ್ತ ಸಂತೋಷ್ ಪಿ.ಕೋಟ್ಯಾನ್ ವಿಜೇತರಿಗೆ ಬಹುಮಾನ ವಿತರಿಸಿದರು.
ಬೆಳ್ತಂಗಡಿ ಘಟಕ ಅಧ್ಯಕ್ಷೆ ವಿದ್ಯಾ ಅಡೂರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಅಖಿಲ ಮತ್ತು ಯಶಸ್ ಸ್ಪರ್ಧೆ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಆಮಂತ್ರಣ ವೇದಿಕೆಯ ಸಂಚಾಲಕ ವಿಜಯ್ ಕುಮಾರ್ ಜೈನ್, ಆಮಂತ್ರಣ ವೇದಿಕೆಯ ರಾಜ್ಯ ಸದಸ್ಯೆ ಆಶಾ ಅಡೂರು ಉಪಸ್ಥಿತರಿದ್ದರು.
ಸಹಪ್ರಾಧ್ಯಾಪಕ ಮಂಜು ಆರ್. ಸ್ವಾಗತಿಸಿದರು. ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಅಶ್ವಿಜಾ ಶ್ರೀಧರ್ ವಂದಿಸಿದರು. ರೇಣುಕಾ ಸುಧೀರ್ ಅರಸಿನಮಕ್ಕಿ ಕಾರ್ಯಕ್ರಮ ನಿರೂಪಿಸಿದರು.