ರಸಪ್ರಶ್ನೆಯಲ್ಲಿ ಹನಗೋಡು ವಿದ್ಯಾರ್ಥಿಗಳ ತಂಡ ಪ್ರಥಮ

HUN-NOV-16-4(ROTARY PROGRAMME)
ಹುಣಸೂರು ರೋಟರಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹನಗೋಡು ಕಾಲೇಜಿನ ತಂಡ ಪ್ರಥಮಸ್ಥಾನ ಗಳಿಸಿದೆ. ಚನ್ನಕೇಶವ, ಲಕ್ಷ್ಮೀಕಾಂತ್, ಪ್ರಸನ್ನ, ಸ್ಮಿತಾ ದಯಾನಂದ್ ಇತರರಿದ್ದರು.
Published on

ಹುಣಸೂರು: ಸುವರ್ಣ ಕನ್ನಡ ರಾಜ್ಯೋತ್ಸವದ ಅಂಗವಾಗಿ ರೋಟರಿ ಸಂಸ್ಥೆ ಮತ್ತು ಇನ್ನರ್‌ವ್ಹೀಲ್ ಕ್ಲಬ್ ಸಹಯೋಗದಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹನಗೋಡು ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮಸ್ಥಾನ ಗಳಿಸಿದೆ.

ರೋಟರಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಹುಣಸೂರು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ತಂಡ ದ್ವಿತೀಯ ಸ್ಥಾನ ಗಳಿಸಿದೆ. ರೋಟರಿ ಅಧ್ಯಕ್ಷ ರೊ.ಚನ್ನಕೇಶವ ಮಾತನಾಡಿ, ಇತ್ತೀಚೆಗೆ ಮಾತೃಭಾಷೆಯೊಂದಿಗಿನ ಅವಿನಾಭಾವ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದೇವೆ. ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸುವ ಕಾರ್ಯ ನಡೆಸುವ ಅಗತ್ಯ ಇದೆ ಎಂದರು.

ಉಪನ್ಯಾಸಕ ಲಕ್ಷ್ಮೀಕಾಂತ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ತಾಲೂಕಿನ ಗಾವಡಗೆರೆ, ಹನಗೋಡು, ಬಿಳಿಕೆರೆ, ರತ್ನಪುರಿ ಮತ್ತು ಹುಣಸೂರು ಕಾಲೇಜಿನ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ರೋಟರಿ ಕಾರ್ಯದರ್ಶಿ ಡಾ.ಕೆ.ಪಿ.ಪ್ರಸನ್ನ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸ್ಮಿತಾ ದಯಾನಂದ್, ರೋಟರಿ ವಿದ್ಯಾ ಸಂಸ್ಥೆ ಮುಖ್ಯಶಿಕ್ಷಕಿ ದೀಪಾ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net