ನೊಂದವರಿಗೆ ತ್ವರಿತ ಪರಿಹಾರ

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ರಾಜ್ಯ ವಾನವ ಹಕ್ಕುಗಳ ಆಯೋಗದ ತಂಡ ಭೇಟಿ ನೀಡಿ ಪರಿಶೀಲಿಸಿತು. ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್, ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ದಾಖಲೆಗಳನ್ನು ಪರಿಶೀಲಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ, ವೃತ್ತ ನಿರೀಕ್ಷಕ ಮಂಜುನಾಥ್ ಮತ್ತಿತರರು ಇದ್ದರು.
22
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ರಾಜ್ಯ ವಾನವ ಹಕ್ಕುಗಳ ಆಯೋಗದ ತಂಡ ಭೇಟಿ ನೀಡಿ ಪರಿಶೀಲಿಸಿತು. ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್, ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ದಾಖಲೆಗಳನ್ನು ಪರಿಶೀಲಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ, ವೃತ್ತ ನಿರೀಕ್ಷಕ ಮಂಜುನಾಥ್ ಮತ್ತಿತರರು ಇದ್ದರು.
Published on

ಅಧ್ಯಕ್ಷ ಶ್ಯಾಮ್‌ಭಟ್ ಹೇಳಿಕೆ ಚಿಕ್ಕಬಳ್ಳಾಪುರಕ್ಕೆ ಮಾನವಹಕ್ಕು ಆಯೋಗದ ತಂಡ ಭೇಟಿ



ಚಿಕ್ಕಬಳ್ಳಾಪುರ: ಹಕ್ಕುಗಳ ಉಲ್ಲಂಘನೆ ಪ್ರಕರಣದಲ್ಲಿ ನೊಂದವರಿಗೆ ತ್ವರಿತವಾಗಿ ಪರಿಹಾರ ಸಿಗಬೇಕು ಎಂದು ರಾಜ್ಯ ವಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಾನವ ಹಕ್ಕುಗಳ ಉಲ್ಲಂನೆ ಪ್ರಕರಣಗಳು ಹೆಚ್ಚಾಗಿ ಪೊಲೀಸ್ ಇಲಾಖೆಯಲ್ಲಿ, ಬಳಿಕ ಕಂದಾಯ ಹಾಗೂ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ ವರದಿಯಾಗುತ್ತಿವೆ. ಅರ್ಜಿದಾರರು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದು ದೂರು ನೀಡಿ, ಇತ್ಯರ್ಥಪಡಿಸಿಕೊಳ್ಳಲು ಕಷ್ಟಪಡುತ್ತಿರುವುದನ್ನು ಅರಿತು, ಜಿಲ್ಲಾ ಪ್ರವಾಸ ಕೈಗೊಂಡು, ಅಲ್ಲಿಯೇ ಇತ್ಯರ್ಥಪಡಿಸಲಾಗುತ್ತಿದೆ. ಕಳೆದ ಎಂಟು ತಿಂಗಳಿನಿಂದ 14 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಇದೇ ವೇಳೆ ಹೊಸ ದೂರು ಮತ್ತು ಅಹವಾಲುಗಳನ್ನು ಆಲಿಸಲಾಗಿದೆ. ಸರ್ಕಾರಿ ಕಚೇರಿಗಳಿಗೆ ತೆರಳಿ, ವ್ಯವಸ್ಥೆಯನ್ನು ವೀಕ್ಷಿಸಲಾಗಿದೆ ಎಂದರು.
ಸಾವಾಜಿಕ ಬಹಿಷ್ಕಾರ, ಭ್ರೂಣ ಹತ್ಯೆ ಸೇರಿ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಸಿಕ್ಕಿದ ತಕ್ಷಣ ಆಯೋಗವು ಪ್ರಕರಣಗಳನ್ನು ಸ್ವಯಂ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಇದರ ನಡುವೆ ಜನರು ನೇರವಾಗಿ ಇಲ್ಲವೇ ಆನ್‌ಲೈನ್ ಮೂಲಕ ದೂರು ಸಲ್ಲಿಸಬಹುದು ಎಂದರು.
ರಾಜ್ಯ ವಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ, ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ. ಖಾಸಿಂ, ಕೆಎಸ್‌ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ, ಸವಾಜ ಕಲ್ಯಾಣ ಇಲಾಖೆಯ ತೇಜಾನಂದ ರೆಡ್ಡಿ, ನಿವಾಸಿ ವೈದ್ಯ ರಮೇಶ್ ಮತ್ತಿತರರು ಇದ್ದರು.

2,598 ಪ್ರಕರಣಗಳು ವಿಲೇವಾರಿಗೆ ಬಾಕಿ
ರಾಜ್ಯ ವಾನವ ಹಕ್ಕುಗಳ ಆಯೋಗದಲ್ಲಿ ಕಳೆದ ಸಾಲಿನ ನವೆಂಬರ್‌ನಲ್ಲಿ 8054 ಪ್ರಕರಣಗಳು ಬಾಕಿ ಇದ್ದು ಇವುಗಳ ಪೈಕಿ ಇದುವರೆಗೆ 5,456 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ, ಪ್ರಸ್ತುತ 2,598 ಪ್ರಕರಣಗಳನ್ನು ವಿಲೇವಾರಿಗೊಳಿಸಬೇಕಾಗಿದೆ ಎಂದು ಟಿ. ಶ್ಯಾಮ್‌ಭಟ್ ಮಾಹಿತಿ ನೀಡಿದರು.

ಅಳಲು ತೋಡಿಕೊಂಡ ಜನ
ಸಾರಿಗೆ ಬಸ್ ನಿಲ್ದಾಣದ ಬೇಕರಿಯಲ್ಲಿ ಅವಧಿ ಮೀರಿದ ತಿಂಡಿ ತಿನಿಸು, ಪಾನೀಯಗಳ ಮಾರಾಟ, ಬಸ್‌ಗಾಗಿ ಪ್ರಯಾಣಿಕರ ಪರದಾಟ, ಆಸ್ಪತ್ರೆ ಆವರಣದ ನೆಲದಲ್ಲಿ ಕುಳಿತು ಅಳಲು ತೋಡಿಕೊಂಡ ರೋಗಿಗಳು, ಇವು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು. ಮೊದಲೇ ತಂಡದ ಆಗಮನ ಬಗ್ಗೆ ತಿಳಿದುಕೊಂಡಿದ್ದ ಅಧಿಕಾರಿಗಳು ರೆಡಿಮೇಡ್ ಉತ್ತರ ಮತ್ತು ಜನರನ್ನು ಮಾತುಗಳ ಮೂಲಕ ನಿಭಾಯಿಸಲು ಯತ್ನಿಸಿದರು. ಹಲವು ಕಡೆ ಲೋಪಗಳು ಕಂಡುಬಂದರೂ ಸಾವಧಾನವಾಗಿ ಮಾಹಿತಿ ಸಂಗ್ರಹಿಸಲಾಯಿತು. ನಿರ್ಲಕ್ಷ್ಯ ತೋರಿದವರನ್ನು ತರಾಟೆಗೆ ತೆಗೆದುಕೊಳ್ಳುವ ಕೆಲಸವಾಗಲಿಲ್ಲ. ಇನ್ನೂ ಜಿಲ್ಲಾಮಟ್ಟದ ಅಧಿಕಾರಿಗಳು ಗಂಭೀರ ಸಮಸ್ಯೆಗಳು ಮತ್ತು ಅಧೀನ ಸಿಬ್ಬಂದಿಯ ನಿಗಾ ವೈಖರಿಯ ಬಗ್ಗೆ ಪರಸ್ಪರ ನಗುತ್ತ ಮಾತನಾಡಿಕೊಂಡರು. ಅಧ್ಯಕ್ಷರ ಸಲಹೆಗೆ ತಲೆಯಾಡಿಸಿದರು.

ನಿರ್ಲಕ್ಷ್ಯಕ್ಕೆ ನಿದರ್ಶನ
ಬಸ್ ನಿಲ್ದಾಣದಲ್ಲಿ ಒಂದು ವರ್ಷಕ್ಕೂ ಅವಧಿ ಮೀರಿದ ಪಾನೀಯ, ತಿಂಡಿ ತಿನಿಸುಗಳನ್ನು ನಿರ್ಭಯವಾಗಿ ಮಾರಲಾಗುತ್ತಿತ್ತು. ಇದಕ್ಕೂ ದುಬಾರಿ ದರ ನಿಗದಿ ಮಾಡಿರುವ ಆರೋಪಗಳು ಕೇಳಿ ಬಂದವು. ಮೊದಲಿಗೆ ಅಧ್ಯಕ್ಷರ ತಂಡವು ಜಿಲ್ಲಾ ಕಾರಾಗಹಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ ಹಾಗೂ ಅಲ್ಲಿನ ಸ್ವಚ್ಛತೆ ಬಗ್ಗೆ ವೀಕ್ಷಿಸಿತು. ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲು ಸೂಚಿಸಿತು. ಬಳಿಕ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮನವಿ ಕೇಳಿ ಬಂತು.

ರಶ್… ದರ್ಪ…
ದಿಬ್ಬೂರಹಳ್ಳಿ ಕಡೆಗೆ ಸಮರ್ಪಕವಾಗಿ ಬಸ್ ಇಲ್ಲ. ಪ್ರತಿ ಬಾರಿಯೂ ತುಂಬಾ ರಶ್ ಆಗಿರುತ್ತದೆ. ನೂಕು ನುಗ್ಗಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಯಾಣಿಕರು ಅಳಲು ತೋಡಿಕೊಂಡರೆ, ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ರೋಗಿಗಳೊಂದಿಗೆ ದರ್ಪದಲ್ಲಿ ಮಾತನಾಡುವ ಆರೋಪ ಕೇಳಿ ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net