

ಬೆಂಗಳೂರು: ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಮ್ಯಾನೇಜ್ಮೆಂಟ್ ಸ್ಟಡಿಸ್ ಮತ್ತು ರಿಸರ್ಚ್ ಸೆಂಟರ್, ನಗರದಲ್ಲಿ ಫೆ.14ರಿಂದ ಎರಡು ದಿನ ಆಯೋಜಿಸಿದ್ದ "ಕ್ವೆಸ್ಟ್-2025 ಮ್ಯಾನೇಜ್ಮೆಂಟ್' ಫೆಸ್ಟ್ ಯಶಸ್ವಿಯಾಗಿ ನಡೆಯಿತು.
ವಿಪ್ರೋದ ಡಾ. ಪ್ರವಿಣ್ ಕಾಮತ್ ಕುಂಬ್ಳೆ ಚಾಲನೆ ನೀಡಿದರು. ಆರ್ಎನ್ಎಸ್ಐಟಿ ಬೆಂಗಳೂರು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿ ಟ್ರೋಫಿ ಗೆದ್ದುಕೊಂಡಿತು. ರಾಷ್ಟ್ರೀಯ ಮಟ್ಟದ ಹ್ಯಾಕಾಥಾನ್ ಝೆರೋದಾ ಸಹಯೋಗದೊಂದಿಗೆ ಆಯೋಜಿಸಲಾಯಿತು. ನಾಸಿಕ್ನ ಕೆಕೆ ವಾಘ್ ಇನ್ಸ್ಟಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಜುಕೇಷನ್ನ ರಿಸರ್ಚ್ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದು 20 ಸಾವಿರ ರೂ. ನಗದು ಬಹುಮಾನ ಪಡೆದರು.
ಮಾನವ ಸಂಪನ್ಮೂಲ (ಎಚ್ಆರ್), ಬಿಜಿನೆಸ್ ಅನಾಲಿಟಿಕ್ಸ್, ಮಾರ್ಕೆಟಿಂಗ್, ಫೈನಾನ್ಸ್, ಉತ್ತಮ ನಿರ್ವಹಣಾ ತಂಡ, ಉತ್ತಮ ನಿರ್ವಾಹಕ, ಬಿಜಿನೆಸ್ ಕ್ವಿಜ್ ಮತ್ತು ಇ-ಕ್ರೀಡೆಗಳ ಸೇರಿ ಇತರ ಸ್ಪರ್ಧೆಗಳು ನಡೆದವು. ನಿರ್ವಹಣಾ ಪರಿಕಲ್ಪನೆಗಳನ್ನು ಪೌರಾಣಿಕ ಕಥೆಗಳೊಂದಿಗೆ ಸಂಯೋಜಿಸುವ ಹೊಸ ಪ್ರಯತ್ನ ಇದಾಗಿತ್ತು. 270 ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಾಂಶುಪಾಲ ಡಾ. ಭೀಮ್ಷಾ ಆರ್ಯ, ಉಪಪ್ರಾಂಶುಪಾಲ ಡಾ. ಶೇಷಾಚಲಂ ಮತ್ತಿತರರಿದ್ದರು.