ಕರೊನಾ ಸೋಂಕಿತ ಯುವಕನಿಗೆ ನೆರವಾದ ಆರೋಗ್ಯ, ಪೊಲೀಸ್​ ಸಿಬ್ಬಂದಿಗೂ ಕ್ವಾರಂಟೈನ್​

Home Quarantain
Published on

ಹುಬ್ಬಳ್ಳಿ: ನಗರದ ಯುವಕನೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟ ನಂತರ, ಆತನಿಗೆ ನೆರವಾಗಿದ್ದ ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿಗೂ ಕ್ವಾರಂಟೈನ್​ಗೆ ಸೂಚಿಸಲಾಗಿದೆ.

ಸೋಂಕಿತನನ್ನು ಮೊದಲು ಪರೀಕ್ಷಿಸಿದಾಗ ಕರೊನಾ ದೃಢಪಟ್ಟಿರಲಿಲ್ಲ. ಆದರೆ, ರೋಗ ಲಕ್ಷಣಗಳಿದ್ದವು. ಹಾಗಾಗಿ ಆತನನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಆ ಸಮಯದಲ್ಲಿ ಆತನ ಉಪಚಾರಕ್ಕಾಗಿ ನೇಮಕಗೊಂಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಯಂ ಪ್ರೇರಿತನಾಗಿ ತನ್ನ ಆರೋಗ್ಯ ಪರೀಕ್ಷಿಸಿಕೊಳ್ಳಲು ಅಪೇಕ್ಷಿಸಿದ್ದರು. ಸದ್ಯ ಅವರನ್ನು ಅದೇ ಹೋಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಸೋಂಕಿತನ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಕೂಡಲೆ ಆತನನ್ನು ಕಿಮ್್ಸ ಆಸ್ಪತ್ರೆಗೆ ಸ್ಥಳಾಂತರಿಸುವಲ್ಲಿ ಕಮರಿಪೇಟೆ ಠಾಣೆಯ ಇಬ್ಬರು ಎಎಸ್​ಐಗಳು, ಒಬ್ಬ ಹವಾಲ್ದಾರ್ ಹಾಗೂ ಇಬ್ಬರು ಪೇದೆಗಳು ಪಾಲ್ಗೊಂಡಿದ್ದರು. ಆತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಅವರ ಕಫದ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಅವರು ಹೋಟೆಲ್ ಕೋಣೆಗಳಲ್ಲಿ ಪ್ರತ್ಯೇಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net