More

    ಸೂಕ್ತ ವಾಹನ ವ್ಯವಸ್ಥೆಯಿಲ್ಲದೇ ಮಗು ಸಾವು: ಆಂಬುಲೆನ್ಸ್​ ನೀಡಲು ನಿರಾಕರಣೆ, ಕಣ್ಣೀರಿಡುತ್ತಾ ಮೃತದೇಹ ಹೊತ್ತು ನಡೆದ ತಾಯಿ

    ಜೆಹಾನಾ​ಬಾದ್​(ಬಿಹಾರ): ಆಂಬುಲೆನ್ಸ್​ ಒದಗಿಸಲು ನಿರಾಕರಿಸಿದ್ದಕ್ಕೆ ಬಿಹಾರದ ದಂಪತಿ ತಮ್ಮ 3 ವರ್ಷದ ಮಗುವಿನ ಮೃತದೇಹವನ್ನು ಹೊತ್ತುಕೊಂಡೆ ಸಾಗಿದ ಹೃದಯ ವಿದ್ರಾವಕ ಘಟನೆ ಪಟನಾದ 48 ಕಿ.ಮೀ ದೂರದಲ್ಲಿರುವ ಜೆಹಾನಾ​ಬಾದ್​ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.

    ಆಸ್ಪತ್ರೆ ಮಂಡಳಿಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿರುವ ಮೃತ ಮಗುವಿನ ಪಾಲಕರು, ಲಾಕ್​ಡೌನ್​ ಹಿನ್ನೆಲೆಯಲ್ಲಿ ಆಂಬುಲೆನ್ಸ್​ ವ್ಯವಸ್ಥೆಯು ಸಿಗಲಿಲ್ಲ. ಒಂದರಿಂದ ಇನ್ನೊಂದು ಆಸ್ಪತ್ರೆಗೆ ನಮ್ಮನ್ನು ಓಡಾಡಿಸಿದರು. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲಿಲ್ಲ ಎಂದು ದೂರಿದ್ದಾರೆ.

    ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೃತ ಮಗುವಿನ ದೇಹವನ್ನು ತನ್ನ ತೋಳಿನಲ್ಲಿ ಹಿಡಿದುಕೊಂಡು ಅಸಹಾಯಕರಾಗಿ ರೋಧಿಸುತ್ತಿರುವುದು ಹಾಗೂ ಮಗುವಿನ ತಂದೆ ಪತ್ನಿಯ ಬಳಿ ನಿಂತಿರುವುದು ವಿಡಿಯೋದಲ್ಲಿದೆ. ಸ್ಥಳೀಯರೊಬ್ಬರು ಯಾರಾದರೂ ಇವರಿಗೆ ಸಹಾಯ ಮಾಡಿ ಎನ್ನಲು, ಈಗ ನಮಗೆ ಆಂಬುಲೆನ್ಸ್​ ಬೇಕಾಗಿಲ್ಲ ಎಂದು ತಂದೆ ನೋವಿನಿಂದ ಮಾತನಾಡಿರುವ ಮನಕಲಕುವ ದೃಶ್ಯ ವಿಡಿಯೋದಲ್ಲಿದೆ.

    ಮೃತ ಮಗನ ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿರುವ ತಂದೆ ಗಿರಿಜ್​ ಕುಮಾರ್​, ಎರಡು ದಿನಗಳ ಹಿಂದೆ ಮಗ ಅನಾರೋಗ್ಯಕ್ಕೀಡಾಗಿದ್ದ. ಜ್ವರ, ಶೀತ ಮತ್ತು ಕೆಮ್ಮು ಇತ್ತು. ಆರಂಭದಲ್ಲಿ ನಮ್ಮ ಶಹೊಪರ್ ಗ್ರಾಮದ ವೈದ್ಯರನ್ನು ಸಂಪರ್ಕಿಸಿದೆವು. ಮಗನ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ್ದರಿಂದ ಲಾಕ್​ಡೌನ್​ನಿಂದ ಆಂಬುಲೆನ್ಸ್​ ಪಡೆಯಲು ಸಾಧ್ಯವಾಗದೇ ಟೆಂಪೋ ಬಾಡಿಗೆ ಪಡೆದು ಜೆಹಾನಾಬಾದ್​​ ಸರ್ಕಾರಿ ಆಸ್ಪತ್ರೆಗೆ ಕರೆತಂದವು.

    ಬಳಿಕ ಜೆಹಾನ್​ಬಾದ್​ ಆಸ್ಪತ್ರೆಯ ವೈದ್ಯರು ಪಟನಾದ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು. ಆದರೆ, ಆಂಬುಲೆನ್ಸ್​ ಒದಗಿಸಲಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ನಾವು ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ ಎಂದು ಮೃತ ಮಗುವಿನ ತಂದೆ ದೂರಿದ್ದಾರೆ.

    ಮಗನ ಸಾವಿನ ನಂತರ ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾವುದೇ ವಾಹನಗಳು ಸಿಗದಿದ್ದರಿಂದ ಹಾಗೂ ಆಂಬುಲೆನ್ಸ್​ ನೀಡದಿದ್ದರಿಂದ ಮಗುವಿನ ದೇಹವನ್ನೇ ಹೊತ್ತುಕೊಂಡೇ ಸಾಗಿದ್ದಾರೆ. ಈ ಮಧ್ಯೆ ಸ್ಥಳೀಯಯ ಸಹಾಯದಿಂದ ಹೇಗೋ ತಮ್ಮ ಗ್ರಾಮವನ್ನು ತಲುಪಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಬೆನ್ನಲ್ಲೇ ನೆಟ್ಟಿಗರು ಬಿಹಾರ ರಾಜ್ಯದ ಆರೋಗ್ಯ ಸೌಕರ್ಯಗಳನ್ನು ಪ್ರಶ್ನಿಸಿ, ಸರ್ಕಾರದ ವಿರುದ್ಧ ಭಾರೀ ಟೀಕಾ ಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್​)

    ಪತಿಯ ಆ ಒಂದು ನಿರ್ಧಾರದಿಂದ ಖಿನ್ನತೆಗೆ ಜಾರಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts