ಪಾಲಕರ ಮೌಲ್ಯಯುತ ಜೀವನ ಮಕ್ಕಳ ಬದುಕಿಗೆ ದಾರಿ ದೀಪ

07 HRS 05
Published on

ಹಿರೀಸಾವೆ: ಮಕ್ಕಳ ಮನಸ್ಸು ಪರಿಶುದ್ಧತೆಯ ಮಣ್ಣಿನಂತೆ. ಶಿಕ್ಷಣವೆಂಬ ನೀರನ್ನು ಎರೆದು ಮೌಲ್ಯಯುತ ಸ್ವರ್ಶ ನೀಡಿದರೆ ಒಂದು ಸುಂದರ ಮಡಕೆಯಾಗಿ ರೂಪುಗೊಳ್ಳಲಿದ್ದಾರೆ ಎಂದು ಜ್ಞಾನಪ್ರಭಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಎ.ಜಿ.ಪ್ರಭಾಕರ್ ಹೇಳಿದರು.


ಪಟ್ಟಣದ ಜ್ಞಾನಪ್ರಭಾ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಜ್ಞಾನ ಸಂಪತ್ತು ಸಿಕ್ಕರೂ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಪಾಲಕರ ನಡೆ-ನುಡಿ ಹಾಗೂ ಮೌಲ್ಯಯುತ ಜೀವನ ಮಕ್ಕಳ ಬದುಕಿಗೆ ದಾರಿ ದೀಪವಾಗಲಿದೆ ಎಂದು ತಿಳಿಸಿದರು.


ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ಕಾರ್ಯದರ್ಶಿ ಹರೀಶ್, ಸಿದ್ದರಾಜು, ಕಿರುತೆರೆ ನಟರಾದ ಗಿಲ್ಲಿ ನಟ, ದರ್ಶನ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಜಗದೀಶ್, ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net