ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಿ

cctv cameras
Published on

ಮುದಗಲ್: ಮುಖ್ಯರಸ್ತೆ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಪಿಎಸ್‌ಐ ವೆಂಕಟೇಶ ಮಾಡಗೇರಿ ಬುಧವಾರ ಹೇಳಿದರು.

ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಬಂಗಾರ ವ್ಯಾಪಾರಸ್ಥರ ಹಾಗೂ ಪೆಟ್ರೋಲ್ ಬಂಕ್‌ಗಳ ಮಾಲೀಕರ ಸಭೆಯಲ್ಲಿ ಬುಧವಾರ ಮಾತನಾಡಿದರು. ಕ್ಯಾಮರಾಕ್ಕೆ ಒಂದು ತಿಂಗಳ ದೃಶ್ಯಾವಳಿ ಸಂಗ್ರಹವಾಗುವ ಸಾಮರ್ಥ್ಯವಿರಬೇಕು. ಅಂಗಡಿಯಲ್ಲಿರುವ ಸರಕು, ಒಳಗೆ ಬರುವ ಮಾರ್ಗದ ಜತೆಗೆ ಮುಖ್ಯ ರಸ್ತೆ ಕಾಣುವಂತೆ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಇದರಿಂದ ತಪ್ಪಿತಸ್ಥರನ್ನು ಹಿಡಿಯಲು ಪೊಲೀಸ್ ಇಲಾಖೆ ಸಹಾಯವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net