ಅಬ್ಬಬ್ಬಾ, ದೊಡ್ಡೇರಿಗೆ ಬಂತು ಹೆಬ್ಬಾವು…

snake
Published on

ನ್ಯಾಮತಿ: ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಬೃಹತ್ ಹೆಬ್ಬಾವನ್ನು ಹಿಡಿದು, ಹರಮಘಟ್ಟ ರಾಜ್ಯ ಅರಣ್ಯ ವಲಯದಲ್ಲಿ ಬಿಡಲಾಯಿತು.

ಗ್ರಾಮದ ವೀರಭದ್ರೇಶ್ವರ ದೇವಾಲಯದ ಸಮೀಪ ಕಂಡುಬಂದ ಸುಮಾರು 9 ಅಡಿ ಉದ್ದದ ಹೆಬ್ಬಾವು ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು.

ಸಾರ್ವಜನಿಕರು ತಕ್ಷಣವೇ ಶಿವಮೊಗ್ಗದ ಉರಗರಕ್ಷಕ ಸ್ನೇಕ್ ಕಿರಣ್ ಅವರನ್ನು ಸಂಪರ್ಕಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಕಿರಣ್ ಹೆಬ್ಬಾವನ್ನು ಹಿಡಿದು, ಹರಮಘಟ್ಟ ರಾಜ್ಯ ಅರಣ್ಯ ವಲಯದಲ್ಲಿ ಸುರಕ್ಷಿತವಾಗಿ ಬಿಟ್ಟರು.

ಈ ವೇಳೆ ಮಾತನಾಡಿದ ಕಿರಣ್, ಹೆಬ್ಬಾವು ವಿಷಕಾರಕ ಆಗದಿದ್ದರೂ ಅದರ ಕಡಿತದಿಂದ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಸಾರ್ವಜನಿಕರು ಯಾವುದೇ ಹಾವು ಕಂಡರೂ ಅವುಗಳನ್ನು ಕೊಲ್ಲದೆ, ತೊಂದರೆ ಕೊಡದೆ ರಕ್ಷಣೆ ಮಾಡಬೇಕು. ಎಲ್ಲಿಯಾದರೂ ಹಾವುಗಳು ಕಂಡುಬಂದಲ್ಲಿ ಉರಗ ರಕ್ಷಕರನ್ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net