ಜಿ.ಎಲ್ ಆಚಾರ್ಯ ಸ್ವರ್ಣ ಮಳಿಗೆಗಳಲ್ಲಿ ಜಿ.ಎಲ್. ಸ್ವರ್ಣ ಹಬ್ಬಕ್ಕೆ ಚಾಲನೆ

ptr_26 sept GL copy
ಪ್ರತಿಷ್ಠಿತ ಸ್ವರ್ಣಾಭರಣ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ನವರಾತ್ರಿ ಹಾಗೂ ದಸರಾ ಹಬ್ಬದ ಅಂಗವಾಗಿ ನಡೆಯವ ಸ್ವರ್ಣ ಹಬ್ಬಕ್ಕೆ ಖ್ಯಾತ ವಕೀಲ ದಂಪತಿಗಳಾದ ಮಹೇಶ್ ಕಜೆ ಹಾಗೂ ದೀಪಿಕಾ ಕಜೆ ದೀಪ ಬೆಳಗಿಸಿ ಚಾಲನೆ ನೀಡಿದರು.
Published on

ಪುತ್ತೂರು: ಪ್ರತಿಷ್ಠಿತ ಸ್ವರ್ಣಾಭರಣ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ನವರಾತ್ರಿ ಹಾಗೂ ದಸರಾ ಹಬ್ಬದ ಅಂಗವಾಗಿ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ವಿಶೇಷ ಕೊಡುಗೆಗಳೊಂದಿಗೆ ನಡೆಯಲಿರುವ ಜಿ.ಎಲ್. ಸ್ವರ್ಣ ಹಬ್ಬ'ಕ್ಕೆ ಸೆ.26ರಂದು ಚಾಲನೆ ನೀಡಲಾಯಿತು.
ಸ್ವರ್ಣ ಹಬ್ಬಕ್ಕೆ ಖ್ಯಾತ ವಕೀಲ ದಂಪತಿಗಳಾದ ಮಹೇಶ್ ಕಜೆ ಹಾಗೂ ದೀಪಿಕಾ ಕಜೆ ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ವಕೀಲ ಮಹೇಶ್ ಕಜೆ, ಚಿನ್ನಾಭರಣಗಳ ವ್ಯಾಪಾರದಲ್ಲಿ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ರಾಜ್ಯದಲ್ಲಿಯೇ ಉನ್ನತ ಸ್ಥಾನದಲ್ಲಿದೆ. ಪುತ್ತೂರಿನ ಕೀರ್ತಿಯನ್ನು ಹತ್ತೂರಿಗೂ ಪಸರಿಸಿದ ಕೀರ್ತಿ ಸಂಸ್ಥೆಗಿದೆ. ಕ್ಷಮತೆ ಹಾಗೂ ಬದ್ಧತೆಯೊಂದಿಗೆ ಸಂಸ್ಥೆಯು ಉನ್ನತ ಸ್ಥಾನಕ್ಕೆ ಏರಿದೆ. ತಲೆ ತಲಾಂತರಗಳಿಂದ ಬಂದಿರುವ ಪರಂಪರೆ ಈಗ ಮೂರನೇ ತಲೆಮಾರಿಗೂ ಮುಂದುವರಿಯುತ್ತಿದೆ. ಸಂಸ್ಥೆಯ ನೌಕರರಿಂದ ಗ್ರಾಹಕರಿಗೆ ನಗುಮೊಗದ ಸೇವೆ ದೊರೆಯುತ್ತಿದ್ದು ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ನಂಬಿಕೆ ಆಧಾರದಲ್ಲಿ ಬೆಳೆದು ಬಂದಿರುವ ಸಂಸ್ಥೆಯು ಗ್ರಾಹಕರನ್ನು ತನ್ನತ್ತ ಸೆಲೆಯುತ್ತಿದೆ ಎಂದರು.
ರಾಜಿ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ ಆಚಾರ್ಯ, ವೇದಾ ಲಕ್ಷ್ಮೀಕಾಂತ ಆಚಾರ್ಯ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಬಲರಾಮ ಆಚಾರ್ಯ ಸ್ವಾಗತಿಸಿದರು.
ಜಿ.ಎಲ್ ಸ್ವರ್ಣ ಹಬ್ಬದ ವಿಶೇಷತೆ: ಸೆ.26 ರಿಂದ ಅ.5ರ ವರೆಗೆ ನಡೆಯುವ ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರಿಗೆ ಪ್ರತಿ ಒಂದು ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿಯ ನಾಣ್ಯ ಉಚಿತ, ಪ್ರತೀ ಒಂದು ಕ್ಯಾರೆಟ್ ವಜ್ರಾಭರಣ ಖರೀದಿಗೆ 1 ಗ್ರಾಂ ಚಿನ್ನದ ನಾಣ್ಯ ಉಚಿತ, ಬೆಳ್ಳಿಯ ಎಂಆರ್‌ಪಿ ಆಭರಣಗಳ ಮೇಲೆ 5ಶೇ. ರಿಯಾಯಿತಿ ಹಾಗೂ ಪ್ರತೀ 1 ಕೆ.ಜಿ ಬೆಳ್ಳಿಯ ಸಾಮಾಗ್ರಿಗಳ ಮೇಲೆ ರೂ. 2,000 ರಿಯಾಯಿತಿ ಇದೆ. ಪ್ರಸ್ತುತ ಗ್ರಾಹಕರು ಚಿನ್ನದ ದರ ಇಳಿಕೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಜೊತೆಗೆ 916 ಪರಿಶುದ್ಧತೆಯಲ್ಲಿ ನೂರಾರು ವಿನ್ಯಾಸದ ಮದುವೆ ಚಿನ್ನಾಭರಣಗಳು, ಕರಿಮಣಿ ಸರಗಳು, ಮುತ್ತಿನ ಹಾರಗಳು, ಪ್ರಾಚಿ ಲೈಟ್ ವೇಟ್ ಆ್ಯಂಟಿಕ್ ಚಿನ್ನಾಭರಣಗಳು, ಜಗಮಗಿಸುವ ಅಂತರಾಷ್ಟ್ರೀಯ ಲ್ಯಾಬ್ ಸರ್ಟಿಫೈಡ್ ಗ್ಲೋ ವಜ್ರಾಭರಣಗಳು ಕಂಗೊಳಿಸುವ ಬೆಳ್ಳಿ ಆಭರಣಗಳು ಇಲ್ಲಿದೆ. ಸಾಮಾನ್ಯ ಜನತೆಗೂ ಅನುಕೂಲವಾಗುವಂತ ರೂ.1 ಲಕ್ಷ ಬೆಲೆಯ ವಜ್ರದ ಆಭರಣಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಬಲರಾಮ ಆಚಾರ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net