ವಿಜಯರತ್ನ ಬಲರಾಮ ಆಚಾರ್ಯರಿಗೆ ಅಭಿನಂಧನೆ ಸಲ್ಲಿಸಿದ ಶಾಸಕ ಸಂಜೀವ ಮಠಂದೂರು

be23c0f0-fba1-4aa4-8d49-5c73f44d0757
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವಿಜಯರತ್ನ ಪುರಸ್ಕೃತ ಬಲರಾಮ ಆಚಾರ್ಯ ಅವರನ್ನು ಜಿ.ಎಲ್ ಸಮೂಹ ಸಂಸ್ಥೆಗೆ ಭೇಟಿ ನೀಡಿ ಅಭಿನಂಧಿಸಿದರು.
Published on

ಪುತ್ತೂರು: ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಚಾನಲ್ ವತಿಯಿಂದ ಕೊಡಮಾಡಲಾದ ವಿಜಯರತ್ನ-2022 ಪ್ರಶಸ್ತಿಗೆ ಬಾಜನರಾದ ಪುತ್ತೂರಿನ ಜಿ.ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ ಅವರನ್ನು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅಭಿನಂಧಿಸಿದರು.

ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಚಾನಲ್ ಸಂಸ್ಥೆಯು ಪುತ್ತೂರಿನ ಜಿ.ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ ಅವರನ್ನು ವಿಜಯರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ವಿಆರ್‌ಎಲ್ ಸಂಸ್ಥೆಯನ್ನು ಅಭಿನಂದಿಸಿದರು.
ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರ ಬಿಜೆಪಿ ಅಧ್ಯಕ್ಷ ಸಾಜಾ ರಾಧಕೃಷ್ಣ ಆಳ್ವ, ನಗರಸಭಾ ಸದಸ್ಯ ಜನನ್ನಿವಾಸ್ ರಾವ್, ಹಿರಿಯ ಮುಖಂಡ ಅಪ್ಪಯ್ಯ ಮಣಿಯಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net