ಬೇಸಾಯದ ಗತ ವೈಭವ ಮರುಕಳಿಸುವುದು ಅಗತ್ಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶಪ್ರಸಾದ್

ptr_18jul bhatta
ಬಿತ್ತನೆ ಬೀಜವನ್ನು ಪ್ರಗತಿಪರ ಕೃಷಿಕ ಜಯಂತ ಪಡ್ನೂರು ಎಂಬವರಿಗೆ ಹಸ್ತಾಂತರಿಸುವ ಮೂಲಕ ಪುತ್ತೂರು ದೇವರಮಾರು ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Published on

ಪುತ್ತೂರು: ದೇವರಮಾರು ಗದ್ದೆಯಲ್ಲಿ ಬಿತ್ತನೆ ಮಾಡುವ ಮೂಲಕ ಬೇಸಾಯದ ಗತಕಾಲದ ವೈಭವನ್ನು ಮರುಕಳಿಸಿದೆ. ಈ ಒಂದು ಗದ್ದೆಯಲ್ಲಿ ಶ್ರೀ ದೇವರ ಅನುಗ್ರಹದಿಂದ ಉತ್ತಮ ಪೈರು ಬಂದು ಶ್ರೀ ದೇವರ ನೈವೇದ್ಯಕ್ಕೆ ಉಪಯೋಗ ಆಗುವಂತಾಗಲಿ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ನೈವೇದ್ಯಕ್ಕಾಗಿ ದೇವರಮಾರು ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಭತ್ತದ ಬೇಸಾಯ ಪದ್ದತಿಯನ್ನು ಉಳಿಸುವ ನಿಟ್ಟಿನಲ್ಲಿ ಭತ್ತ ಬೇಸಾಯದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಇಳುವರಿಯನ್ನು ಪಡೆದುಕೊಂಡು ಆಹಾರದಲ್ಲಿ ಪುತ್ತೂರು ಸ್ವಾವಲಂಭಿಯಾಗಲು ಎಲ್ಲರ ಸಹಕಾರ ಅಗತ್ಯ. ಭಾವನಾತ್ಮಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಬೇಸಾಯವನ್ನು ನಡೆಸಿಕೊಂಡು ಭತ್ತದ ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಯುವ ಜನತೆ ಹೆಚ್ಚಾಗಿ ಸಾಂಪ್ರದಾಯಿಕ ಬೇಸಾಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ತುಳುನಾಡಿನ ಪರಂಪರೆಯನ್ನು ಉಳಿಸಬೇಕು ಎಂದರು.
ಬಿತ್ತನೆ ಬೀಜವನ್ನು ಪ್ರಗತಿಪರ ಕೃಷಿಕ ಜಯಂತ ಪಡ್ನೂರು ಎಂಬವರಿಗೆ ಹಸ್ತಾಂತರಿಸುವ ಮೂಲಕ ಬೀಜ ಬಿತ್ತಲು ಚಾಲನೆ ನೀಡಲಾಯಿತು.
ಬೆಳಿಗ್ಗೆ ದೇಳದ ಸತ್ಯಧರ್ಮ ನಡೆಯಲ್ಲಿ ಬಿತ್ತನೆ ಬೀಜವನ್ನು ಇಟ್ಟು ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿದರು. ಬಳಿಕ ದೇವರಮಾರು ಗದ್ದೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವಿ.ಎಸ್ ಭಟ್ ಅವರು ಪ್ರಾರ್ಥನೆಯೊಂದಿಗೆ ಬೀಜ ಬಿತ್ತುವ ಕಾರ್ಯಕ್ರಮ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಸುಧಾ ಎಸ್ ರಾವ್, ರಾಮದಾಸ್ ಗೌಡ, ವೀಣಾ ಬಿ.ಕೆ, ಬಿ.ಐತ್ತಪ್ಪ ನಾಯ್ಕ, ರವೀಂದ್ರನಾಥ್ ರೈ ಬಳ್ಳಮಜಲು, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಕೃಷಿಕ ಸುದೇಶ್ ಚಿಕ್ಕಪುತ್ತೂರು, ಇಂದುಶೇಖರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net