ಕುಂಬಳೆ ಸೀಮೆಯಲ್ಲಿ ಪ್ರಾಕೃತಿಕ ಕ್ಷೋಭೆ ದೂರ : ದೇಲಂಪಾಡಿ ಗಣೇಶ ತಂತ್ರಿ ಹಾರೈಕೆ

New Project (24)
Published on

ಬದಿಯಡ್ಕ: ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಧನ್ವಂತರಿ ಪುತ್ರಕಾಮೇಷ್ಠಿ ಯಾಗ 2025 ಮೇ 12ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.

ದೇಲಂಪಾಡಿ ಗಣೇಶ ತಂತ್ರಿ ಬಿಡುಗಡೆಗೊಳಿಸಿ ಮಾತನಾಡಿ, ಯಾಗ ಯಜ್ಞಾದಿಗಳಿಂದ ಪರಿಸರ ಶುಭ್ರಗೊಂಡು ಸುಭಿಕ್ಷೆ ನೆಲೆಯಾಗುತ್ತದೆ. ಕುಂಬಳೆ ಸೀಮೆಯಲ್ಲಿ ಪ್ರಾಕೃತಿಕವಾಗಿ ಯಾವುದೇ ಕ್ಷೋಭೆಯಿಲ್ಲದಂತೆ ಆಗಬೇಕು. ಪುತ್ರಕಾಮೇಷ್ಠಿಯ ಪ್ರಭಾವದಿಂದ ಎಲ್ಲ ಮನೆಗಳಲ್ಲೂ ಸಂತತಿ ಹೆಚ್ಚಾಗಿ ಸಮೃದ್ಧ ಕುಟುಂಬವಾಗಲಿ ಎಂದು ಹಾರೈಸಿದರು.

ಯಾಗ ಸಮಿತಿಯ ಅಧ್ಯಕ್ಷ ರಘುನಾಥ ಪೈ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಯಾಗಸಮಿತಿಯ ಮಹಾಪೋಷಕರಾದ ಮಧುಸೂದನ ಆಯರ್ ಮಂಗಳೂರು, ಶಿವಶಂಕರ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಆಚಾರ್ ಎಂ.ಬಿ, ಕಾರ್ಯದರ್ಶಿ ಗಣೇಶವತ್ಸ ಮುಳ್ಳೇರಿಯ ಉಪಸ್ಥಿತರಿದ್ದರು.

ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೆಕ್ರಾಜೆ ಕ್ಷೇತ್ರದ ಅಧ್ಯಕ್ಷ ವಿ.ಡಿ.ಶೆಟ್ಟಿ, ಉಪಾಧ್ಯಕ್ಷ ರಾಮಚಂದ್ರ ಬಲ್ಲಾಳ್, ನಿತ್ಯಾನಂದ ನೆಲ್ಲಿತ್ತಲ, ಕೋಶಾಧ್ಯಕ್ಷ ಬಾಲಕೃಷ್ಣ ನೀರ್ಚಾಲ್ ಹಾಗೂ ಗೋಪಾಲಕೃಷ್ಣ ಭಟ್, ಮಹಿಳಾ ಸಮಿತಿ, ಯುವಜನ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಸೀತಾರಾಮ ಭಟ್ ಮವ್ವಾರು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net