ಜೆಸಿಬಿಗೆ ಬೆಂಕಿ ಹಾಕಿ ಸುಟ್ಟು ಹಾಕಿ

Masale_jayram
Published on

ಗುಬ್ಬಿ: ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಹಿನ್ನೆಲೆ ಪ್ರತೀ ಊರಿನಲ್ಲಿ ಒಂದು ಕಾವಲು ಸಮಿತಿ ಮಾಡಿಕೊಳ್ಳಿ. ಏನಾದರೂ ನಿಮ್ಮ ಊರಿಗೆ ಜೆಸಿಬಿ ಬಂದರೆ ಅವತ್ತೇ ಬೆಂಕಿ ಇಟ್ಟು ಜೆಸಿಬಿ ಸುಟ್ಟು ಹಾಕಿ. ಮುಂದೆ ಏನಾದರೂ ನಾವು ಬರುತ್ತೀವಿ ಎಂದು ಬಿಜೆಪಿ ಮಾಜಿ ಶಾಸಕ ಮಸಾಲ ಜಯರಾಂ ಹೇಳಿದರು.

ತಾಲೂಕಿನ ಡಿ.ರಾಂಪುರ ಬಳಿ ನಮ್ಮ ನೀರು, ನಮ್ಮ ಹಕ್ಕು ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ವಿರೋಧಿ ಹೋರಾಟದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಎಲ್ಲಾ ಭಾಗ್ಯ ಕೊಟ್ಟಿದ್ದೀರಿ, ಒಂದು ವಿಷದ ಬಾಟಲಿ ಕೊಟ್ಟುಬಿಡಿ , ನಾವೆಲ್ಲಾ ರೈತ ಬಾಂಧವರು ವಿಷ ಕುಡಿದು ಸತ್ತು ಹೋಗುತ್ತೀವಿ ಎಂದರು.

ಇಇ ತಿಥಿ ಮಾಡುತ್ತೀವಿ: ನೋಟಿಸ್ ಕೊಟ್ಟಿದ್ದ ಹೇಮಾವತಿ ಇಇ ಇವತ್ತು ಇಲ್ಲಿ ಬಂದು ನೋಡು ನಿನ್ನ ತಿಥಿ ಊಟಕ್ಕೆ ರೆಡಿ ಮಾಡಿಟ್ಟಿದ್ದು, ನಿನ್ನ ತಿಥಿ ಮಾಡುತ್ತೀವಿ. ಪ್ರತಿ ಊರು ಊರಿನವರು ಎಚ್ಚತ್ತುಕೊಳ್ಳಬೇಕು. ಪ್ರತಿ ಊರಿನಲ್ಲಿ ಒಂದು ಕಾವಲು ಸಮಿತಿ ಮಾಡಿಕೊಂಡು ಲಿಂಕ್ ಕೆನಾಲ್ ಕಾಮಗಾರಿಗೆ ಯಾವುದೇ ಕಾರಣಕ್ಕು ಅವಕಾಶ ಕೊಡಬೇಡಿ. ಬಿಜೆಪಿ ವಿರುದ್ಧ ಚೊಂಬು ಜಾಹಿರಾತು ಕೊಟ್ಟಿದ್ದರಲ್ಲ, ಈಗ ತುಮಕೂರಿನ ಜನರಿಗೆ ನೀವು ಚೊಂಬು ಕೊಡ್ತಿದ್ದೀರಲ್ಲ ಎಂದು ಮಸಾಲ ಜಯರಾಂ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net