ಪುಷ್ಪರಾಜ್ ಎಂ.ನಾಯಕ್‌ಗೆ ಡಾಕ್ಟರೇಟ್ ಪದವಿ

push
Published on

ಹೆಬ್ರಿ: ಮಾಹೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಪುರದ ಪುಷ್ಪರಾಜ್ ಎಂ.ನಾಯಕ್ ಉದ್ಯಮಶೀಲತಾ ಉದ್ದೇಶವನ್ನು ನಿರ್ಮಿಸುವಲ್ಲಿ ಉದ್ಯಮಶೀಲತೆ ಶಿಕ್ಷಣದ ಶೀರ್ಷಿಕೆಯ ಅನುಭವದ ಕಲಿಕೆ ಮತ್ತು ಸಾಂಪ್ರದಾಯಿಕ ಕಲಿಕೆ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಮಾಹೆ ಮಣಿಪಾಲದ ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ.ಹರೀಶ್ ಜಿ.ಜೋಶಿ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ್ದಾರೆ. ಪುಷ್ಪರಾಜ್ ಎಂ.ನಾಯಕ್ ಹೆಬ್ರಿ ತಾಲೂಕಿನ ಶಿವಪುರ ಮುರ್ಸಾಲು ಮೋಹನದಾಸ ನಾಯಕ್ ಮತ್ತು ಶಕುಂತಳಾ ನಾಯಕ್ ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net