

ಬೆಂಗಳೂರು: ನಮ್ಮ ಮೆಟ್ರೋ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರಲ್ಲಿ ಅಡಚಣೆ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ಮೈಸೂರು ರೋಡ್ನಿಂದ ಕೆಂಗೇರಿ ನಡುವೆ ನೂತನ ಮಾರ್ಗ ನಿರ್ಮಿಸುವ ಸಲುವಾಗಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಆಗಸ್ಟ್ 11 ಮತ್ತು 12 ರಂದು ವಿಜಯನಗರದಿಂದ ಮೈಸೂರು ರೋಡ್ಗೆ ಸಂಚರಿಸುವ ನೇರಳೆ ಮಾರ್ಗ ಬಂದ್ ಆಗಲಿದೆ.
ಈ ಎರಡು ದಿನ ಬೆಳಗ್ಗೆ 07 ರಿಂದ ಸಂಜೆ 08 ರವರೆಗೆ ಬೈಯಪ್ಪನಹಳ್ಳಿಯಿಂದ ವಿಜಯನಗರದವರೆಗೆ ಸಂಚರಿಸಬಹುದಾಗಿದೆ. ಆಗಸ್ಟ್ 13 ರಂದು ಎಂದಿನಂತೆ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ. ಅಲ್ಲದೇ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನೇರಳೆ ಮಾರ್ಗವನ್ನು ವಿಸ್ತರಣೆ ಮಾಡುತ್ತಿರುವುದರಿಂದ ನಾಯಂಡಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ಮತ್ತು ಕೆಂಗೇರಿಯಲ್ಲಿ ಮೆಟ್ರೋ ನಿಲ್ದಾಣ ಎಂಬ ಆರು ಹೊಸ ನಿಲ್ದಾಣಗಳನ್ನು ಗುರುತಿಸಲಾಗಿದೆ.