ಮನೆಗೆ ಬಂದ ಸ್ನೇಹಿತನ ಬಗ್ಗೆ ಎಚ್ಚರ... ಇಲ್ದಿದ್ರೆ ನಿಮಗೂ ಇದೆ ಗತಿ

pic thetf
Published on

ಬೆಂಗಳೂರು: ಸ್ನೇಹ ಮಾಡೋದು ತಪ್ಪಲ್ಲ, ಆದರೆ ಅದಕ್ಕೆ ಅರ್ಹನಲ್ಲದವನ ಜೊತೆ ಸ್ನೇಹ ಸಂಬಂಧ ಬೆಳೆಸುವುದು ತಪ್ಪು. ಇದಕ್ಕೆ ಸಾಕ್ಷಿ ಎಂಬಂತೆ ಸ್ನೇಹಿತನ ಸೋಗಿನಲ್ಲಿ ಮನೆಗೆ ಬಂದು ಕಳ್ಳತನ ಮಾಡಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಅಮಿತ್ ಬಂಧಿತ ಆರೋಪಿಯಾಗಿದ್ದು, ಈತನಿಂದ 18 ಗ್ರಾಂ ಚಿನ್ನದ ಸರ ಹಾಗೂ ಒಂದು ರಾಯಲ್ ಎನ್​​ಫೀಲ್ಡ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ:

ಒಂದೇ ಕಂಪನಿಯಲ್ಲಿ ದೂರುದಾರ ಹಾಗೂ ಆರೋಪಿ ಅಮಿತ್ ಕೆಲಸ ಮಾಡುತ್ತಿದ್ದು, ಒಂದು ದಿನ ದೂರುದಾರನ ಮನೆಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ದೂರುದಾರ ಮನೆಯ ರೂಂನಿಂದ ಮೊಬೈಲ್ ತರಲು ತೆರಳಿದ್ದಾನೆ. ಈ ವೇಳೆ ಹೊರಗಡೆಯಿಂದ ರೂಂ ಲಾಕ್ ಮಾಡಿ ಚಿನ್ನದ ಸರ ಹಾಗೂ ಪರ್ಸ್ ನಲ್ಲಿದ್ದ 3 ಸಾವಿರ ಹಣ ಕಳ್ಳತನ ಮಾಡಿದ್ದಾನೆ. ಬಳಿಕ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದನು.

ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net