ಹಬ್ಬಕ್ಕೆ ಪೂಜಾ ಸಾಮಗ್ರಿಗಳ ಖರೀದಿ

30blrp3
Published on

ಬೇಲೂರು: ಆಯುಧ ಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಬೆಲೆ ಏರಿಕೆಯ ನಡುವೆಯೂ ಪಟ್ಟಣದ ಮುಖ್ಯರಸ್ತೆ, ದೇಗುಲ ರಸ್ತೆ ಹಾಗೂ ಹೊಯ್ಸಳ ಮಾರುಕಟ್ಟೆಯಲ್ಲಿ ಮಂಗಳವಾರ ಹೂವು, ಹಣ್ಣುಗಳ ವ್ಯಾಪಾರ ವಹಿವಾಟು ಬಿರುಸಾಗಿ ನಡೆಯಿತು.

ಪಟ್ಟಣದ ಮುಖ್ಯರಸ್ತೆಯ ಒಂದೆಡೆ, ಹರ್ಡೀಕರ್ ವೃತ್ತ, ಮಾರುಕಟ್ಟೆ ಒಳ ಆವರಣ ವರ್ತಕರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿತ್ತು. ಜತೆಗೆ ಬಸ್ ನಿಲ್ದಾಣ ಮುಂಭಾಗದ ದೇವಸ್ಥಾನಕ್ಕೆ ತೆರಳುವ ರಸ್ತೆಯ ಎರಡು ಬದಿಯಲ್ಲೂ ಹಾಗೂ ವಾಹನಗಳ ನಿಲುಗಡೆ ಸ್ಥಳದಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದರಿಂದ ಮಂಗಳವಾರ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೂದು ಗುಂಬಳ ಹಾಗೂ ಹೂವಿನ ಹಾರ, ಹೂವು, ಹಣ್ಣು ಹಾಗೂ ಇತರೆ ಸಾಮಾಗ್ರಿ ಕೊಳ್ಳಲು ಮುಂದಾಗಿದ್ದರು. ಜತೆಗೆ ಹಬ್ಬಕ್ಕೆಂದು ತಮ್ಮ ಊರುಗಳಿಗೆ ತೆರಳುತ್ತಿದ್ದವರಿಗೂ ಟ್ರಾಫಿಕ್ ಬಿಸಿ ಮುಟ್ಟಿಸಿತು. ಜತೆಗೆ ಪಟ್ಟಣದ ಮುಖ್ಯರಸ್ತೆ, ದೇಗುಲ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಿತ್ತು. ಮತ್ತೆ ಕೆಲವೆಡೆ ವಾಹನ ಸಂಚಾರದಲ್ಲಿ ವ್ಯತ್ಯಯವಾದ್ದರಿಂದ ಪೊಲೀಸರು ಪರದಾಡುವಂತಾಗಿತ್ತು.

ಚಿತ್ರ:30(ಬಿಎಲ್‌ಆರ್)3-ಆಯುಧ ಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಬೇಲೂರು ಪಟ್ಟಣದಲ್ಲಿ ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಿದ ಜನರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net